ಅತೃಪ್ತಿ ತಂದಿದ್ದ ಹೇಳಿಕೆ
2017ರಿಂದ 2024ರ ನಡುವೆ ಭಾರತದಲ್ಲಿ ನಡೆದ ಕೆಲವು ಬೆಳವಣಿಗೆಗಳ ಕುರಿತಾಗಿ ಇರಾನ್ ಪರಮೋಚ್ಚ ನಾಯಕ ಅಯಾತೊಲ್ಲಾ ಖಮೇನಿ ಅವರು ನೀಡಿದ್ದ ಹೇಳಿಕೆಗಳು ಆಡಳಿತಾರೂಢ ಎನ್‌ಡಿಎ ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿದ್ದವು. ಕಾಶ್ಮೀರ ವಿಚಾರ, 370ನೇ ವಿಧಿ ರದ್ದು, 2020ರಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರ, ಪೌರತ್ವ ತಿದ್ದುಪಡಿ ಕಾಯ್ದೆಯ ವಿಚಾರವಾಗಿ ಖಮೇನಿ ಅವರು ಕೇಂದ್ರ ಸರ್ಕಾರದ ನಿಲುವಿಗೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಭಾರತವು ಇರಾನಿನ ರಾಯಭಾರಿಯನ್ನು ಕರೆದು ತನ್ನ ಆಕ್ಷೇಪ ದಾಖಲಿಸಿತ್ತು.