‘ಡಿಜಿಟಲ್ ಇಂಡಿಯಾ’ ವಂಚನೆ; ಸಿಸಿಬಿಯಿಂದ ತನಿಖೆ

ಬುಧವಾರ, ಜೂನ್ 19, 2019
28 °C

‘ಡಿಜಿಟಲ್ ಇಂಡಿಯಾ’ ವಂಚನೆ; ಸಿಸಿಬಿಯಿಂದ ತನಿಖೆ

Published:
Updated:

ಬೆಂಗಳೂರು: ‘ಡಿಜಿಟಲ್ ಇಂಡಿಯಾ’ ಅಡಿ ಯೋಜನೆಗಳನ್ನು ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿರುವ ಬಗ್ಗೆ ಕೊಡಿಗೇಹಳ್ಳಿ ಹಾಗೂ ಹೈಗ್ರೌಂಡ್ಸ್‌ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ತನಿಖೆ ಜವಾಬ್ದಾರಿಯನ್ನು ಸಿಸಿಬಿಗೆ ವಹಿಸಲಾಗಿದೆ.

‘ದೇಶದ ಪ್ರತಿಯೊಂದು ಗ್ರಾಮಗಳನ್ನು ಡಿಜಿಲೀಕರಣ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ. ಹಿರಿಯ ಅಧಿಕಾರಿಗಳು ಪರಿಚಯವೆಂದು ಹೇಳಿಕೊಳ್ಳುತ್ತಿದ್ದ ಪೀಣ್ಯದ ನಿವಾಸಿ ವಿನಯ್ ಹಾಗೂ ಆತನ ಪತ್ನಿ ಸಾರ್ವಜನಿಕರನ್ನು ವಂಚಿಸಿದ್ದಾರೆ’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ತಾನೊಬ್ಬ ಉದ್ಯಮಿ ಎಂದು ಪರಿಚಯಿಸಿಕೊಳ್ಳುತ್ತಿದ್ದ ವಿನಯ್, ‘ಡಿಜಿಟಲ್ ಇಂಡಿಯಾದಡಿ ಯೋಜನೆಗಳನ್ನು ಪಡೆದರೆ, ಕೋಟ್ಯಂತರ ರೂಪಾಯಿ ಲಾಭ ಗಳಿಸಬಹುದು. ಆರಂಭದಲ್ಲಿ ಸ್ವಲ್ಪ ಹಣ ಹೂಡಿಕೆ ಮಾಡಿದರೆ, ಹಿರಿಯ ಅಧಿಕಾರಿಗಳ ಮೂಲಕ ಯೋಜನೆ ಕೊಡಿಸುತ್ತೇನೆ’ ಎಂದು ಹೇಳುತ್ತಿದ್ದ. ಅದನ್ನು ನಂಬಿದ್ದ ಲೆಕ್ಕಾಧಿಕಾರಿ ಸೇರಿ ಹಲವರು ಆತನಿಗೆ ಹಣ ಕೊಟ್ಟಿದ್ದರು.’

‘ಹಣ ಪಡೆದು ತಿಂಗಳಾದರೂ ಆರೋಪಿ, ಯಾವುದೇ ಯೋಜನೆ ಕೊಡಿಸಿರಲಿಲ್ಲ. ಆ ಬಗ್ಗೆ ಕೇಳಿದಾಗ, ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ತಾನೇ ತೆರೆದಿದ್ದ ನಕಲಿ ಫೇಸ್‌ಬುಕ್‌ ಖಾತೆಯಲ್ಲಿ ಯೋಜನೆ ಬಗ್ಗೆ ಚಾಟಿಂಗ್‌ ಮಾಡಿದ್ದನ್ನು ತೋರಿಸಿ ಸುಮ್ಮನಾಗಿಸಿದ್ದ. ಇತ್ತೀಚೆಗೆ ಆತನ ವರ್ತನೆಯಿಂದ ಅನುಮಾನಗೊಂಡ ಹೂಡಿಕೆದಾರರು, ಠಾಣೆಗೆ ದೂರು ನೀಡಿದ್ದರು’ ಎಂದು ಅಧಿಕಾರಿ ಹೇಳಿದರು.

‘ವಿನಯ್ ಹಾಗೂ ಆತನ ಪತ್ನಿ ತಲೆಮರೆಸಿಕೊಂಡಿದ್ದಾರೆ. ಅವರು ಸಿಕ್ಕ ಬಳಿಕವೇ ವಂಚನೆ ಮೊತ್ತವೆಷ್ಟು ಎಂಬುದು ತಿಳಿಯಲಿದೆ’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !