ಗುರುವಾರ , ಜೂನ್ 17, 2021
22 °C

ರಾಠೋಡ ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಇಲ್ಲಿಯ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ರಾಠೋಡ ಶುಕ್ರವಾರ ನಾಮಪತ್ರ ಸಲ್ಲಿಸಿದರು.

ರಾಠೋಡ ಅವರ ಪತ್ನಿ ಡಾ.ಬಿ.ಎಲ್‌. ಸುಜಾತಾ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶರಣಪ್ಪ ಸುಣಗಾರ, ಆಜಾದ್‌ ಪಟೇಲ್‌ ಹಾಗೂ ಸಿದ್ದಣ್ಣ ಹಿರೇಕುರಬರ ಉಪಸ್ಥಿತರಿದ್ದರು.‘ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಇದೇ 24ರಂದು ಕಾರ್ಯಕರ್ತರು, ನಾಯಕರೊಂದಿಗೆ ಮೆರವಣಿಗೆ ನಡೆಸಿ ಮತ್ತೊಂದು ನಾಮಪತ್ರ ಸಲ್ಲಿಸುತ್ತೇನೆ’ ಎಂದು ರಾಠೋಡ ಹೇಳಿದರು.ಈ ವರೆಗೆ ಒಟ್ಟಾರೆ ನಾಲ್ಕು (ಮೂವರು ಅಭ್ಯರ್ಥಿಗಳು) ನಾಮಪತ್ರ ಗಳು ಸಲ್ಲಿಕೆಯಾಗಿವೆ. ಇದೇ ತಿಂಗಳ 26 ರವರೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.