ಶನಿವಾರ, ಏಪ್ರಿಲ್ 17, 2021
31 °C

‘ಶಿಕ್ಷಣದ ಕಾಳಜಿ ಹೊಂದಿದ್ದ ಸಂಗನಬಸವಶ್ರೀ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಂಬಾ: ‘ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಬಂಥನಾಳದ ಸಂಗನಬಸವ ಮಹಾ ಶಿವಯೋಗಿಗಳು 50 ವರ್ಷದ ಹಿಂದೆಯೆ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಬಲವಾಗಿ ನಂಬಿದ್ದರು. ಬರಗಾಲಕ್ಕೆ ತುತ್ತಾಗುತ್ತಿರುವ ವಿಜಯಪುರ ಜಿಲ್ಲೆಯನ್ನು ಶಿಕ್ಷಣವಂತರನ್ನಾಗಿ ಮಾಡಿ ಬೆಳಕು ಚೆಲ್ಲಿದರು’ ಎಂದು ಕಸಾಪ ಇಂಡಿ ತಾಲ್ಲೂಕು ಘಟಕದ ಅಧ್ಯಕ್ಷ ಕಾಂತು ಇಂಡಿ ಹೇಳಿದರು.

ಬಂಥನಾಳ ಗ್ರಾಮದಲ್ಲಿ ಹಮ್ಮಿಕೊಂಡ ಸಂಗನಬಸವ ಮಹಾ ಶಿವಯೋಗಿಗಳ 47ನೇ ಪುಣ್ಯಸ್ಮರಣೋತ್ಸವದಲ್ಲಿ ಮಾತನಾಡಿದ ಅವರು, ಸಂಗನಬಸವ ಶಿವಯೊಗಿಗಳ ಬದುಕಿನಲ್ಲಿ ನಡೆದ ಹಲವು ಪವಾಡಗಳನ್ನು ಮೆಲಕು ಹಾಕಿದರು.

‘ವಿಜಯಪುರದಲ್ಲಿ ಬಂಗಾರೆಮ್ಮ ಸಜ್ಜನ ಅವರಿಂದ ಭೂಮಿ ದಾನ ಪಡದು ವಿಜಯ ಕಾಲೇಜು ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯನ್ನು ಮತ್ತು ತಾಂಬಾ ಗ್ರಾಮದ ವೃಷಭಲಿಂಗೇಶ್ವರ ವಿದ್ಯಾಸಂಸ್ಥೆಯನ್ನು ತಮ್ಮ ಜೋಳಿಗೆಯಿಂದ ಪ್ರಾರಂಭಿಸಿದ ಕೀರ್ತಿ ಸಂಗನಬಸವ ಮಹಾಶಿವಯೋಗಿಗಳಿಗೆ ಸಲ್ಲುತ್ತದೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಬಂಥನಾಳದ ವೃಷಭಲಿಂಗ ಮಹಾಶಿವಯೋಗಿ ಮಾತನಾಡಿ, ‘ಬಂಥನಾಳದ ಸಂಗನಬಸವ ಶಿವಯೋಗಿಗಳು ಕೆಳಮಟ್ಟದಿಂದ ಮೇಲ್‌ಸ್ತರಕ್ಕೆ ವಿಚಾರಮಾಡಿದ ಏಕೈಕ ಶಿವಯೋಗಿಗಳು. ಸಂಗನಬಸವ ಶಿವಯೋಗಿಗಳಿಗೆ ಯಾವೊಬ್ಬ ಮಠಾಧೀಶರನ್ನಾಗಲಿ, ಜಗದ್ಗುರುಗಳನ್ನಾಗಲಿ ಹೋಲಿಸಬಾರದು’ ಎಂದರು.

ಕಾರ್ಯಕ್ರಮಕ್ಕೆ ಮೊದಲು ಗ್ರಾಮದಲ್ಲಿ ಶ್ರೀಗಳ ಭಾವಚಿತ್ರದ ಮೆರವಣಿಗೆಯನ್ನು ನಡೆಲಾಯಿತು. ಎ.ಪಿ.ಕಾಗವಾಡಕರ್, ಶರಣಪ್ಪ ಜಾಲವಾದ, ಸಿದ್ದನಗೌಡ ಪಾಟೀಲ ಹಾಗೂ ಬಂಥನಾಳ, ತಾಂಬಾ, ಸುರಗಿಹಳ್ಳಿ, ಚಾಂದಕವಠೆ, ಚಟ್ಟರಕಿ, ಬಳಗಾನೂರ, ಕೊರಳ್ಳಿ, ಚಿಕ್ಕರೂಗಿ, ಗಂಗನಳ್ಳಿ, ಹಿಟ್ಟಳ್ಳಿ, ಲಚ್ಯಾಣ, ಸಾತಿಹಾಳ, ಪಡನೂರ, ಕನ್ನೊಳ್ಳಿ, ಬೋಳೆಗಾಂವ ಸೇರಿದಂತೆ ನಾನಾ ಬಾಗದ ಭಕ್ತರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.