ಎಸಿಬಿ ದಾಳಿ: ಪೊಲೀಸ್ ಕಾನ್‌ಸ್ಟೆಬಲ್ ವಶಕ್ಕೆ

7

ಎಸಿಬಿ ದಾಳಿ: ಪೊಲೀಸ್ ಕಾನ್‌ಸ್ಟೆಬಲ್ ವಶಕ್ಕೆ

Published:
Updated:
Deccan Herald

ಕುದೂರು (ಮಾಗಡಿ): ಇಲ್ಲಿನ ಪೊಲೀಸ್ ಠಾಣೆಯ ಮುಂಭಾಗ ಶುಕ್ರವಾರ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದು, ಠಾಣೆಯ ಕಾನ್‌ಸ್ಟೆಬಲ್‌ ಮಂಜುನಾಥ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯು ವ್ಯಕ್ತಿಯೊಬ್ಬರಿಂದ ₹ 70 ಸಾವಿರ ಲಂಚ ಪಡೆಯುತ್ತಿದ್ದಾಗ ಅಧಿಕಾರಿಗಳು ದಾಳಿ ಮಾಡಿದರು. ಕುದೂರು ಪೊಲೀಸರು ಕ್ಯಾಟ್‌ ಫಿಶ್‌ ಸಾಕಣೆ ವಿಚಾರವಾಗಿ ಗರ್ಗೇಶಪುರ ಗ್ರಾಮದ ಮಹಿಳೆಯೊಬ್ಬರಿಂದ ₹ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಸಂಬಂಧಿಸಿದ ಮಾಲೀಕರು ಎಸಿಬಿಗೆ ದೂರು ನೀಡಿದ್ದು, ಅಧಿಕಾರಿಗಳ ಸೂಚನೆಯಂತೆ ಹಣ ನೀಡುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿದರು ಎಂದು ತಿಳಿದುಬಂದಿದೆ.
 

ದೇವಸ್ಥಾನದ ಹುಂಡಿ ಕಳವು
ರಾಮನಗರ: ಇಲ್ಲಿನ ಅಗ್ರಹಾರದಲ್ಲಿರುವ ಅಭಯ ಆಂಜನೇಯಸ್ವಾಮಿ ದೇವಸ್ಥಾನದ ಬೀಗ ಒಡೆದು ಒಳನುಗ್ಗಿದ ಕಳ್ಳರು ಹುಂಡಿಯಲ್ಲಿನ ಹಣ ದೋಚಿ ಪರಾರಿಯಾಗಿದ್ದಾರೆ.

ಗುರುವಾರ ತಡರಾತ್ರಿ 2 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿದೆ. ದೇಗುಲದ ಮೂರು ಬೀಗಗಳನ್ನು ಮೀಟಿ ಒಳ ಪ್ರವೇಶಿಸುವ ಕಳ್ಳರು ಬಳಿಕ ಹುಂಡಿಯ ಬೀಗ, ಚಿಲಕವನ್ನೂ ಅಷ್ಟೇ ನಾಜೂಕಿನಿಂದ ಮುರಿದು ಹಣ ದೋಚಿದ್ದಾರೆ. ಕೇವಲ 15 ನಿಮಿಷದಲ್ಲಿ ಈ ಕೃತ್ಯ ನಡೆದಿದೆ. ಕಳ್ಳರ ಈ ಚಟುವಟಕೆಗಳು ದೇಗುಲದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೂರು ಮಂದಿಯ ತಂಡವು ಈ ಕೃತ್ಯ ನಡೆಸಿದೆ ಎನ್ನಲಾಗಿದೆ. ಗುರುವಾರ ಮಧ್ಯರಾತ್ರಿವರೆಗೂ ದೇಗುಲದ ಸಮೀಪದಲ್ಲಿಯೇ ಅನ್ನಸಂತರ್ಪಣೆಗಾಗಿ ಅಡುಗೆ ಸಿದ್ಧತೆ ಕಾರ್ಯ ನಡೆದಿತ್ತು. ಎಲ್ಲರೂ ನಿದ್ದೆಹೋದ ಸಂದರ್ಭವನ್ನೇ ಬಳಸಿಕೊಂಡು ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ತಿಳಿಸಿದರು.

ರಾಮನಗರ ಟೌನ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !