ಭಾನುವಾರ, ಏಪ್ರಿಲ್ 18, 2021
24 °C

 ಕೆಎಸ್‌ಆರ್‌ಟಿಸಿ ಬಸ್‌ ಹರಿದು ಯುವಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ತಾಲ್ಲೂಕಿನ ಮಲ್ಲೇನಹಳ್ಳಿ ಬಳಿ (ಕುಮಾರಗಿರಿ) ಕೆಎಸ್‌ಆರ್‌ಟಿಸಿ ಬಸ್‌ ಹರಿದು ಯುವ ಕಾಂಗ್ರೆಸ್‌ ಕಾರ್ಯಕರ್ತ ಎನ್‌.ಜಿ.ಮಿಥುನ್‌(21) ಬುಧವಾರ ಸಾವಿಗೀಡಾಗಿದ್ದಾರೆ.

ಮಿಥುನ್‌ ಅವರು ತರೀಕೆರೆ ತಾಲ್ಲೂಕಿನ ನೇರಲಕೆರೆ ಗ್ರಾಮದವರು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸ್ನೇಹಿತನೊಂದಿಗೆ ಚಿಕ್ಕಮಗಳೂರಿಗೆ ಬೈಕ್‌ನಲ್ಲಿ ತೆರಳುವಾಗ ಬೆಳಿಗ್ಗೆ 11 ಗಂಟೆ ಹೊತ್ತಿನಲ್ಲಿ ಅವಘಡ ಸಂಭವಿಸಿದೆ.

ಮಲ್ಲೇನಹಳ್ಳಿ ಬಳಿ ವಿದ್ಯುತ್‌ ಮಾರ್ಗದ ಕಾರ್ಯ ಚಾಲ್ತಿಯಲ್ಲಿದ್ದು, ಮಾರ್ಗದಲ್ಲಿ ನೆಡಲು ಕಂಬಗಳನ್ನು ರಸ್ತೆಯಲ್ಲಿ ಇಡಲಾಗಿತ್ತು. ತರೀಕೆರೆಯಿಂದ ಚಿಕ್ಕಮಗಳೂರು ಕಡೆಗೆ ಬರುತ್ತಿದ್ದ ವ್ಯಾನ್‌ನ ಚಾಲಕ ಕಂಬ ಗಮನಿಸಿ ವ್ಯಾನ್‌ ನಿಲ್ಲಿಸಿದ್ದಾರೆ. ವ್ಯಾನ್‌ ಹಿಂದಿದ್ದ ಬೈಕ್‌ನ ಸವಾರ ಆಗ ಬ್ರೇಕ್‌ ಹಾಕಿದಾಗ ಹಿಂಬದಿ ಸವಾರ ಮಿಥುನ್‌ ಬಲಭಾಗಕ್ಕೆ ಬಿದ್ದಿದ್ದಾರೆ. ಎದುರುಗಡೆ ಬರುತ್ತಿದ್ದ (ತರೀಕೆರೆ ಕಡೆಗೆ ಸಂಚರಿಸುತ್ತಿದ್ದ) ಕೆಎಸ್‌ಆರ್‌ಟಿಸಿ ಬಸ್‌ ಆತನ ಮೇಲೆ ಹರಿದಿದೆ. ತೀವ್ರ ಗಾಯಗೊಂಡಿದ್ದ ಮಿಥುನ್‌ ಆಸ್ಪತ್ರೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ.

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.