ಕಳೆಪೆ ಕಾಮಗಾರಿ ಆರೋಪ

7

ಕಳೆಪೆ ಕಾಮಗಾರಿ ಆರೋಪ

Published:
Updated:
Prajavani

ಮಾಗಡಿ: ‘ಪುರಸಭೆ ವ್ಯಾಪ್ತಿಯ 12ನೇ ವಾರ್ಡಿನ ವಿನ್ನರ್ಸ್‌ ಶಾಲೆಯ ಹಿಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಚರಂಡಿ ಕಾಮಗಾರಿ  ಕಳಪೆಯಿಂದ ಕೂಡಿದೆ’ ಎಂದು ನಿವಾಸಿ ಮಹಮದ್‌ ಖಲೀಲ್‌ ಆರೋಪಿಸಿದರು.

‘ಚರಂಡಿ ನಿರ್ಮಿಸುವಾಗ ಬೇಸ್‌ಮೆಂಟ್ ಹಾಕದೆ, 20 ಬಾಂಡ್ಲಿ ಎಂ ಸ್ಯಾಂಡ್‌ ಮಾತ್ರ ಬಳಸುತ್ತಿದ್ದಾರೆ. 1 ಬಾಂಡ್ಲಿ ಸಿಮೆಂಟ್‌ಗೆ 20 ಬಾಂಡ್ಲಿ ಎಂ ಸ್ಯಾಂಡ್‌ ಹಾಕಿದರೆ ಕಾಮಗಾರಿ ಸ್ವಲ್ಪ ದಿನಕ್ಕೆ ಕಿತ್ತು ಹೋಗಲಿದೆ’ ಎಂದರು.

ವಾರ್ಡ್‌ನ ನಿವಾಸಿ ಸೈಯದ್‌ ಷಪೀವುಲ್ಲಾ ಮಾತನಾಡಿ, ‘ಇಲ್ಲಿ ಕಳಪೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಶಾಸಕ ಎ.ಮಂಜುನಾಥ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಗುತ್ತಿಗೆದಾರರ ಮೋಡಿಗೆ ಸಿಲುಕಿದ್ದಾರೆ. ಗುಣಮಟ್ಟದ ಕಾಮಗಾರಿ ಮಾಡಿಸಬೇಕು’ ಎಂದರು.

‘ಕಳಪೆ ಕಾಮಗಾರಿಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಬಿಲ್‌ ಮಾತ್ರ ಮಾಡಿಕೊಂಡು ಕಾಮಗಾರಿ ಮುಗಿಸುವುದು ನಡೆದೇ ಇದೆ. ವಾರ್ಡಿನ ನಿವಾಸಿಗಳು ಪುರಸಭೆ ಮುಂದೆ ಪ್ರತಿಭಟಿಸುವುದು ಅನಿವಾರ್ಯವಾಗಿದೆ’ ಎಂದು ಅಮನ್‌ ಖಾನ್‌ ದೂರಿದರು.

ಟೆಂಡರ್‌: ಪುರಸಭೆ ಮುಖ್ಯಾಧಿಕಾರಿ ನಟರಾಜ್‌ ಮಾತನಾಡಿ, ಚರಂಡಿ ಕಾಮಗಾರಿ ಬಗ್ಗೆ ಸಿದ್ಧರಾಜು ಎಂಬಾತ ಗುತ್ತಿಗೆ ಪಡದಿದ್ದಾರೆ. ಟೆಂಡರ್‌ನಂತೆ ಕಾಮಗಾರಿ ನಡೆದಿದೆ. ಕಳಪೆಯಾಗಿದ್ದರೆ ಸ್ಥಳ ಪರಿಶೀಲನೆ ನಡೆಸಿ, ಸರಿಪಡಿಸುವುದಾಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !