ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾತನೂರು ಬಳಿ ಖಾಸಗಿ ಕಾರ್ಖಾನೆ ಆರಂಭಕ್ಕೆ ಕ್ರಮ’

Last Updated 23 ಜನವರಿ 2019, 13:48 IST
ಅಕ್ಷರ ಗಾತ್ರ

ಮಾಗಡಿ: ಸಾತನೂರು ಬಳಿ ಎರಡು ಎಕರೆ ಜಮೀನು ಖರೀದಿಸಿ ಕಾರ್ಖಾನೆ ಆರಂಭಿಸಿ 2 ಸಾವಿರ ಜನರಿಗೆ ಉದ್ಯೋಗ ನೀಡುವುದಾಗಿ ಎಲ್‌.ವಿ. ಟ್ರಾವೆಲ್ಸ್‌ ಮಾಲೀಕ ಮತ್ತು ಎಂಎಸ್‌ಎಸ್‌ ಟ್ರಸ್ಟ್‌ ಅಧ್ಯಕ್ಷ ಪರಮಶಿವಯ್ಯ ಭರವಸೆ ನೀಡಿದರು.

ಪಟ್ಟಣದ ಕಲ್ಯಾಬಾಗಿಲು ಬಳಿ ಎಂಎಸ್‌ಎಸ್‌ ಟ್ರಸ್ಟ್‌ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನರಿಗೆ ಉದ್ಯೋಗ ಕೊಡುವುದು ಬಹುಮುಖ್ಯವಾಗಿದೆ. ಮಾಗಡಿ ಸೀಮೆಯ ಜನತೆಗೆ ಸೇವೆ ಮಾಡಲು ಬಂದಿದ್ದೇನೆ. ಎಲ್‌.ವಿ. ಟ್ರಾವೆಲ್ಸ್‌ನ ಎರಡು ಬಸ್‌ಗಳು ಸಂಚರಿಸಲಿವೆ. ಖಾಸಗಿ ಇತರೆ ಬಸ್‌ಗಳಿಗೆ ನಮ್ಮಿಂದ ಸ್ಪರ್ಧೆ ಇಲ್ಲ. ಎಲ್ಲರೊಂದಿಗೆ ಸಹಕಾರ ಪರಸ್ಪರ ಪ್ರಗತಿಗೆ ಪ್ರಾಮಾಣಿಕವಾಗಿ ದುಡಿಯುವ ಹಂಬಲವಿದೆ ಎಂದರು.

ತಹಶೀಲ್ದಾರ್‌ ಎನ್‌. ರಮೇಶ್‌ ಮಾತನಾಡಿದರು. ದಲಿತಪರ ಹೋರಾಟಗಾರ ಕಲ್ಕೆರೆ ಶಿವಣ್ಣ, ದೊಡ್ಡಿ ಗೋಪಿ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್‌.ಎಂ. ಕೃಷ್ಣಮೂರ್ತಿ, ಜುಟ್ಟನಹಳ್ಳಿ ಮಾರೇಗೌಡ, ಹಿರಿಯ ರಂಗಕಲಾವಿದ ಎಚ್‌.ಆರ್‌. ಬ್ಯಾಟಪ್ಪ, ಏಳಿಗೆಹಳ್ಳಿ ತಮ್ಮಣ್ಣ ಬೆಂಗಳೂರಿನ ಖಾಸಗಿ ಬಸ್‌ ಮಾಲೀಕರು ಮತ್ತು ಎಲ್‌.ವಿ. ಗ್ರೂಪ್‌ ಆಫ್‌ ಕಂಪನೀಸ್‌ ನೌಕರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT