ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಳೇದಗುಡ್ಡ: ಮೈದುಂಬಿದ ಮಳೆಗಾಲದ ಜಲಪಾತ

ಒಂದು ತಿಂಗಳಿನಿಂದಲೂ ಹಿರೇ ಹಳ್ಳದ ದಿಡುಗು ಜಲಪಾತ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರು ನಿತ್ಯ ಬರುತ್ತಿದ್ದಾರೆ ಗುಂಡಪ್ಪ ಕೋಟಿ, ಕೋಟೇಕಲ್ ಗ್ರಾಮ
ಎಚ್.ಎಸ್.ಘಂಟಿ
Published 9 ಜೂನ್ 2024, 5:30 IST
Last Updated 9 ಜೂನ್ 2024, 5:30 IST
ಅಕ್ಷರ ಗಾತ್ರ

ಗುಳೇದಗುಡ್ಡ: ಗುಳೇದಗುಡ್ಡ ತಾಲ್ಲೂಕಿನಲ್ಲಿ ಉತ್ತಮ ಮಳೆ ಆಗಿದ್ದರಿಂದ ಮೂರು ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಸೆಳೆಯುತ್ತಿವೆ.

ತಾಲ್ಲೂಕಿನ ಕೋಟೆಕಲ್ ಗ್ರಾಮದ ಗುಡ್ಡದ ಮೇಲಿರುವ ಹಿರೇಹಳ್ಳದ ದಿಡುಗು ಜಲಪಾತ ಒಂದು ತಿಂಗಳಿಂದ ಮೈದುಂಬಿ ಹರಿಯುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಪ್ರವಾಸಿಗರು ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಹಾಲಹಂಡೆ ಜಲಪಾತ: ಇದು ತಾಲ್ಲೂಕಿನ ಹಾನಾಪೂರ ಎಸ್.ಪಿ ಗ್ರಾಮದಲ್ಲಿ ಪೂರ್ವಕ್ಕೆ 1ಕಿ.ಮೀ ಅಂತರದಲ್ಲಿ ಜಲಪಾತವಿದೆ.  ಇಲ್ಲಿ ಬೀಳುವ ನೀರು ಸ್ವಚ್ಛವಾಗಿದ್ದು ಸ್ವಲ್ಪ ಹಾಲಿನ ಬಣ್ಣವನ್ನು ಹೊಂದಿದ್ದರಿಂದ ಮತ್ತು ನೀರು ಬೀಳುವ ಕೆಳಗೆ ಹಂಡೆ ಆಕಾರದ ಸಣ್ಣ ಬಾವಿ ಇರುವುದರಿಂದ ಇದಕ್ಕೆ ಹಾಲಹಂಡೆ ಜಲಪಾತ ಎಂದು ಕರೆಯಲಾಗುತ್ತದೆ.

ಹುಲಿಗೆಮ್ಮನಕೊಳ್ಳದ ಜಲಪಾತ : ಇದು ತಾಲ್ಲೂಕಿನ ಹಾನಾಪೂರ ಎಲ್.ಟಿ (ಸರಸ್ವತಿ ನಗರ) ಹತ್ತಿರ ಅರ್ಧ ಕಿ.ಮೀ ಅಂತರದಲ್ಲಿ ಇದ್ದು, ಗುಡ್ಡದ ಮೇಲಿಂದ ಕೆಳಗೆ ಬೀಳುತ್ತಿದೆ. ನೀರು ಬೀಳುವ ಪ್ರದೇಶದ ಆಳವಾದ ಕೊಳ್ಳದಲ್ಲಿ ಹುಲಿಗೆಮ್ಮದೇವಿ ನೆಲೆಸಿರುವುದರಿಂದ ಇದಕ್ಕೆ ಹುಲಿಗೆಮ್ಮನ ಕೊಳ್ಳದ ಜಲಪಾತ ಎನ್ನಲಾಗುತ್ತದೆ.

ಇವು ಕೇವಲ ಮಳೆಗಾಲದಲ್ಲಿ ಬೀಳುವುದರಿಂದ ಮಳೆಗಾಲದ ಜಲಪಾತಗಳು ಎಂದು ಕರೆಯುತ್ತಾರೆ. ಆದರೂ ತಿಂಗಳುಗಟ್ಟಲೇ ಜಲಪಾತದಲ್ಲಿ ನೀರು ಬೀಳುತ್ತದೆ. ಗುಳೇದಗುಡ್ಡ ಪಟ್ಟಣದಿಂದ ಕೋಟೇಕಲ್ ಜಲಪಾತ 5 ಕಿ.ಮೀ ಅಂತರದಲ್ಲಿದೆ, ನಂತರ ಅದೇ ಮಾರ್ಗವಾಗಿ ಮುಂದೆ ಎಡಕ್ಕೆ ಮುರುಡಿ ಗ್ರಾಮದ ಮೂಲಕ ಮುಂದೆ 5 ಕಿ.ಮೀ ತೆರಳಿದರೆ ಹಾನಾಪೂರ ಎಸ್.ಪಿ ಗ್ರಾಮ ಹತ್ತಿರ ಹಾಲಹಂಡೆ ಜಲಪಾತ ನಂತರ  ಅದೇ ರಸ್ತೆ ಮೂಲಕ ಹಾನಾಪೂರ ಎಲ್.ಟಿ ಗ್ರಾಮದ ಹತ್ತಿರ ಹುಲಿಗೆಮ್ಮನಕೊಳ್ಳದ ಜಲಪಾತವನ್ನು ಕಾಣಬಹುದು.

ಶನಿವಾರ ಹಾಲಹಂಡೆ ಜಲಪಾತಕ್ಕೆ ಭೇಟಿ ನೀಡಿದ್ದ, ಪ್ರವಾಸಿಗ ವಿಠ್ಠಲಸಾ ಬದಿ ಉತ್ತಮವಾಗಿ ನೀರು ಹರಿಯುತ್ತಿದ್ದು, ಪ್ರಕೃತಿ ಸೌಂದರ್ಯ ಆಕರ್ಷಿಸುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT