ಜಮಖಂಡಿ: ಮುಂಗಾರು ಮಳೆಯಾಗದೆ ಬರಗಾಲದ ಭೀತಿ ಎದುರಾಗಿರುವದರಿಂದ ಮುಸ್ಲಿಮರು ಭಾನುವಾರ ಇಲ್ಲಿನ ಬೈತುರ ಮಾಮೂರ ಈದ್ಗಾದಲ್ಲಿ ಜಮಿಯತ್ ಉಲಮಾ ಇ- ಹಿಂದ್ ನೇತೃತ್ವದಲ್ಲಿ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದರು.
ಮಳೆ ಇಲ್ಲದೆ ರೈತರು ಕಂಗಾಲಾಗಿದ್ದು, ಕೃಷಿ ಚಟುವಟಿಕೆ ನಡೆಸಲು ಹಿಂದೇಟು ಹಾಕುವಂತಾಗಿದೆ. ನದಿಗಳು ಬತ್ತಿದ್ದು, ಹಲವು ಕಡೆ ಕುಡಿಯುವ ನೀರಿಗೆ ತೊಂದರೆ ಪ್ರಾರಂಭವಾಗಿದ್ದು, ಪ್ರಾಣಿ, ಪಕ್ಷಿಗಳು ನೀರಿಗಾಗಿ ಪರದಾಡುತ್ತಿವೆ. ‘ಅಲ್ಹಾ ಮಳೆ ಕರುಣಿಸು’ ಪ್ರಾರ್ಥಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.