ರಬಕವಿ ಬನಹಟ್ಟಿ: ಇಲ್ಲಿನ ಕೆ.ಎಚ್.ಡಿ.ಸಿ ಕಾಲೊನಿಯಲ್ಲಿಯ ನಾಗೇಶ್ವರ ದೇವಸ್ಥಾನದ ಜಾತ್ರೆ ಆ. 9ರಂದು ನಡೆಯಲಿದೆ.
ಜಾತ್ರಾ ಕಾರ್ಯಕ್ರಮವನ್ನು ಇಲ್ಲಿನ ಹಿರೇಮಠದ ಶರಣಬಸವ ಶಿವಾಚಾರ್ಯರು ಮತ್ತು ಸ್ಥಳೀಯ ಪ್ರಮುಖರು ಉದ್ಘಾಟಿಸಲಿದ್ದಾರೆ.
ಬೆಳಿಗ್ಗೆ 6ಕ್ಕೆ ಅಭಿಷೇಕ, ಮಧ್ಯಾಹ್ನ 11ಕ್ಕೆ ಹಾಲು ಎರೆಯುವ ಕಾರ್ಯಕ್ರಮ ಮತ್ತು ಮಹಿಳೆಯರಿಗೆ ಉಡಿ ತುಂಬುವ ಹಾಗೂ ನಾಗೇಶ್ವರ ಭಾವಚಿತ್ರದ ಮೆರವಣಿಗೆ ಕಾಲೊನಿಯ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದರು.