ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ಹಾಗೂ ಸಂಶೋಧನಾ ನಿರ್ದೇಶಕರು ಬಾದಾಮಿ ತಾಲ್ಲೂಕಿನ ಚೊಳಚಗುಡ್ಡ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಬೆಳೆಯುವ ವಿಶಿಷ್ಟ ವೀಳ್ಯದೆಲೆಗೆ ಭೌಗೋಳಿಕ ಮಾನ್ಯತೆ ಒದಗಿಸುವ ನಿಟ್ಟಿನಲ್ಲಿ ಪರಿಶೀಲನೆ ಹಾಗೂ ಮುಂದಿನ ಕ್ರಮಗಳ ಕುರಿತು ಕ್ಷೇತ್ರ ಭೇಟಿ ನೀಡಲಾಯಿತು.

ವಿಸ್ತರಣಾ ನಿರ್ದೇಶಕ ವೆಂಕಟೇಶಲು, ಸಂಶೋಧನಾ ನಿರ್ದೇಶಕ ಫಕ್ರುದ್ದೀನ್ ಬಿ ಮತ್ತು ಸಹಾಯಕ ಪ್ರಾಧ್ಯಾಪಕ ಶಶಿಧರ ದೊಡಮನಿ, ರೈತರ ತಾಕುಗಳಿಗೆ ಭೇಟಿ ನೀಡಿ, ಬೆಳೆಯ ಮಾಹಿತಿ ಪಡೆದುಕೊಂಡು ಭೌಗೋಳಿಕ ಗುಣಮಟ್ಟಗಳ ಪರಿಶೀಲನೆ ನಡೆಸಿದರು.

ವಿಳ್ಳೇದೆಲೆ ಬೆಳೆಯುವ ರೈತರಾದ ಮೌನೇಶ ಮರಡಿ, ರುದ್ರಗೌಡ ಮತ್ತು ಜಿ.ಎಸ್. ಪಾಟೀಲ, ‘ಅಂಬಾಡಿ ತಳಿಯ ವೀಳ್ಯದೆಲೆ ಬೆಳೆಯುತ್ತಿದ್ದೇವೆ ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಿನಲ್ಲಿ ಮುಖ್ಯವಾಗಿ ಬೇಕಾಗಿರುವ ಆಧಾರ ಬೆಳೆಯಾಗಿ ನುಗ್ಗೆ, ಚೊಗಚಿ ಮತ್ತು ಬುರುಗ ಬೆಳೆಯುತ್ತೇವೆ. ಮೊದಲನೇ ಕಟಾವನ್ನು ನಾಟಿ ಮಾಡಿದ 4ರಿಂದ 4.5 ತಿಂಗಳಿಗೆ ಮಾಡುತ್ತಾರೆ. ಪ್ರತಿ ತಿಂಗಳಿಗೊಮ್ಮೆ ಕಟಾವು ಮಾಡಿ ಎಕರೆಗೆ ಸರಾಸರಿ 10 ರಿಂದ 12 ಅಂಡಿಗಿಗಳನ್ನು ಪಡೆಯಬಹುದಾಗಿದೆ (ಪ್ರತಿ ಅಂಡಿಗಿಯಲ್ಲಿ 12 ಸಾವಿರ ಎಲೆಗಳಿರುತ್ತವೆ) ಸಾಮಾನ್ಯವಾಗಿ ಒಂದು ಅಂಡಿಗಿಗೆ ₹1500 ರಿಂದ ₹4,500 ಬೆಲೆ ಸಿಗುತ್ತದೆ. ಸ್ಥಳೀಯ ಮಾರುಕಟ್ಟೆ ಬಾದಾಮಿಯಲ್ಲಿ, ಮಹಾರಾಷ್ಟ್ರದ ಲಾತೂರಿಗೆ ಕಳುಹಿಸಲಾಗುತ್ತದೆ’ ಎಂದು ತಿಳಿಸಿದರು.

‘ಇಲ್ಲಿನ ಅಂಬಾಡಿ ವೀಳ್ಯದೆಲೆ ವಿಶೇಷತೆ ಏನೆಂದರೆ ಕಡಿಮೆ-ಮದ್ಯಮ ಕಾಕ, ಅಧಿಕ ಶೇಖರಣಾ ಅವಧಿ (10-12 ದಿನಗಳು), ತಿಳಿ ಹಸಿರು ಬಣ್ಣದಿಂದ ಕೂಡಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ. ವೀಳ್ಯದೆಲೆ ರೈತ ಉತ್ಪಾದಕರ ಸಂಘಗಳು ಇಲ್ಲದಿರುವ ಕಾರಣ ಮಧ್ಯವರ್ತಿಗಳ ಹಾವಳಿಯಿಂದ ಸರಿಯಾದ ಬೆಲೆ ದೊರಕುತ್ತಿಲ್ಲ’ ಎಂದರು.

‘ವಿಶ್ವವಿದ್ಯಾಲಯದ ಮಾರ್ಗದರ್ಶನದಲ್ಲಿ ರೈತ ಉತ್ಪಾದಕರ ಸಂಸ್ಥೆ ಸ್ಥಾಪಿಸಿ, ಮಾರುಕಟ್ಟೆ ಸಂಪರ್ಕ ಮತ್ತು ಭೌಗೊಳಿಕ ಮಾನ್ಯತೆ ನೀಡಿದ್ದೆಯಾದಲ್ಲಿ ಮುಂದಿನ ದಿನಗಳಲ್ಲಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ’ ಎಂದು ವೀಳ್ಯದೆಲೆ ಬೆಳೆಗಾರರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.