ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ | ವೀಳ್ಯದೆಲೆಗೆ ದಾಖಲೆ ಬೆಲೆ

Published 12 ಜೂನ್ 2024, 16:02 IST
Last Updated 12 ಜೂನ್ 2024, 16:02 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ (ಬಾಗಲಕೋಟೆ ಜಿಲ್ಲೆ): ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ 12 ಸಾವಿರ ವೀಳ್ಯದೆಲೆಗಳ ಕಟ್ಟಿನ ದರವು ₹2 ಸಾವಿರದಿಂದ ₹5 ಸಾವಿರಕ್ಕೆ ಏರಿಕೆಯಾಗಿದ್ದು, ಬೆಳೆಗಾರರು ಹರ್ಷಗೊಂಡಿದ್ದಾರೆ.

‘ವೀಳ್ಯದೆಲೆ ಬೆಲೆ ಹೆಚ್ಚಳವಾಗಿದೆ. ತಮಿಳುನಾಡಿನಿಂದ ಎಲೆಗಳ ಪೂರೈಕೆ ಕಡಿಮೆಯಾಗಿದ್ದು, ಈ ಭಾಗದ ಎಲೆಗಳಿಗೆ ಬೇಡಿಕೆ ಹೆಚ್ಚಿದೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ವಾಹನಗಳಲ್ಲಿ ವ್ಯಾಪಾರಸ್ಥರು ಜಗದಾಳ ಮತ್ತು ನಾವಲಗಿ ಗ್ರಾಮಕ್ಕೆ ಬಂದು ಎಲೆಗಳನ್ನು ಖರೀದಿಸುತ್ತಿದ್ದಾರೆ’ ಎಂದು ರೈತ ಶಿವಪ್ಪ ಹಳಿಂಗಳಿ ತಿಳಿಸಿದರು.

‘ನಸುಕಿನ 3 ರಿಂದ 5.30ರವರೆಗೆ ಎಲೆಗಳ ವ್ಯಾಪಾರವಾಗುತ್ತದೆ. ಸ್ಥಳೀಯ ಮಾರಾಟಗಾರರು ಇಲ್ಲಿಯೇ ಬಂದು ಎಲೆಗಳನ್ನು ಒಯ್ಯುತ್ತಾರೆ. ಇಲ್ಲಿನ ವೀಳ್ಯದೆಲೆಗಳನ್ನು ಬೆಂಗಳೂರಿಗೂ ಪೂರೈಸಲಾಗುತ್ತದೆ. ಮಹಾರಾಷ್ಟ್ರದ ಮುಂಬೈ, ಸತಾರಾ, ಕರಾಡಕ್ಕೆ ಕಳುಹಿಸಲಾಗುತ್ತದೆ. ಗುಜರಾತ್‌ನ ಅಹಮದಾಬಾದ್‌ಗೂ ರವಾನೆಯಾಗುತ್ತವೆ’ ಎಂದು ರೈತ ಸದಾಶಿವ ಬಂಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT