ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೇದಗುಡ್ಡ: ಹೂಳು ತುಂಬಿದ ಗಟಾರು ಸ್ವಚ್ಛತೆಗೆ ಒತ್ತಾಯ

Published 24 ಮೇ 2023, 13:24 IST
Last Updated 24 ಮೇ 2023, 13:24 IST
ಅಕ್ಷರ ಗಾತ್ರ

ಗುಳೇದಗುಡ್ಡ: ನಗರದ ಮಧ್ಯಭಾಗದಲ್ಲಿ ಬರುವ ಬನ್ನಿಕಟ್ಟಿಯಿಂದ ಪ್ರಾರಂಭವಾಗಿ ಕಮೇಲಿ ಹತ್ತಿರ ಹಳ್ಳಕ್ಕೆ ಸೇರುವ ದೊಡ್ಡ ಗಟಾರು ಸ್ವಚ್ಛ ಮಾಡದಿರುವುದರಿಂದ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿದು ಹೋಗದ ಕಾರಣ ಸೊಳ್ಳೆ ಉತ್ಪತ್ತಿ ತಾಣವಾಗಿದೆ.

ಭಾರತ ಮಾರ್ಕೆಟ್ ಹತ್ತಿರ ಇರುವ ಈ ಗಟಾರನ್ನು ಸ್ವಚ್ಛ ಮಾಡದಿರುವುದರಿಂದ ಮುಳ್ಳು ಕಂಟಿಗಳು ಬೆಳೆದಿವೆ. ಇದರಿಂದಾಗಿ ಐದು ಅಗಲದ ಗಟಾರು ಈಗ ಮೂರು ಅಡಿಗೆ ಇಳಿದಿದೆ.

ಗಟಾರಿಗೆ ಹೊಂದಿಕೊಂಡಂತೆ ನೂರಾರು ಮನೆಗಳಿದ್ದು, ಸೊಳ್ಳೆ ಕಾಟ, ದುರ್ವಾಸನೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸುತ್ತಲೂ ಇರುವ ಅಂಗಡಿಯ ಕಸ, ಕೊಳಚೆ ನೀರು ಇಲ್ಲಿಯೇ ಸೇರುತ್ತಿದೆ. ಪುರಸಭೆ ಅಧಿಕಾರಿಗಳು ಹಾಗೂ ವಾರ್ಡ್ ಸದಸ್ಯರು ಗಮನಹರಿಸಿ ಕಾಲ ಕಾಲಕ್ಕೆ ಗಟಾರನ್ನು ಸ್ವಚ್ಛ ಮಾಡಬೇಕು ಎಂಬುದು ನಿವಾಸಿಗಳ ಆಗ್ರಹ.

ಬಾಳು ತಿವಾರಿ, ಜಗದೀಶ್ ನಾಯ್ಕ, ಸಿದ್ದು ನಿಲ್ಲುಗಲ್, ಹುಸೇನ್ ಭಾಷಾ, ನಜೀರ್ ಸಾಬ್ ಕುರುಡಗಿ, ಬಸವರಾಜ, ಸಂಗಪ್ಪ, ಈರಣ್ಣ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT