ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣೆ ಕರ್ತವ್ಯದಲ್ಲಿದ್ದಾಗ ಸಾವು: ₹15 ಲಕ್ಷ ಪರಿಹಾರ ವಿತರಣೆ

Published 20 ಜೂನ್ 2024, 15:53 IST
Last Updated 20 ಜೂನ್ 2024, 15:53 IST
ಅಕ್ಷರ ಗಾತ್ರ

ಬಾಗಲಕೋಟೆ: ಲೋಕಸಭಾ ಚುನಾವಣೆ ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದ್ದ ಮುಧೋಳ ತಾಲ್ಲೂಕಿನ ಬಿದರಿ ಜನತಾ ಪ್ಲಾಟ್ ಎಲ್.ಪಿ.ಎಸ್‍ನ ಸಹ ಶಿಕ್ಷಕ ಗೋವಿಂದಪ್ಪ ಸಿದ್ದಾಪುರ ಕುಟುಂಬ ಸದಸ್ಯರಿಗೆ ಗುರುವಾರ ₹15 ಲಕ್ಷ ಪರಿಹಾರವನ್ನು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ವಿತರಿಸಿದರು.

ಮೃತ ಗೋವಿಂದ ಸಿದ್ದಾಪುರ ಲೋಕಸಭಾ ಚುನಾವಣೆಯ  ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ನಿಯೋಜಿಸಲಾಗಿತ್ತು. ಮೇ 6ರಂದು ಚುನಾವಣಾ ಮಸ್ಟರಿಂಗ್ ಕರ್ತವ್ಯಕ್ಕೆಂದು ಮುಧೋಳ ವಿಧಾನಸಭಾ ಕ್ಷೇತ್ರದಿಂದ ಜಮಖಂಡಿಗೆ ತೆರಳುವ ಸಂದರ್ಭದಲ್ಲಿ ಬಸ್ ನಿಲ್ದಾಣದಲ್ಲಿಯೇ ಹೃದಯಾಘಾತದಿಂದ ಮರಣ ಹೊಂದಿದ್ದರು.

ಮೃತರ ಕುಟುಂಬಕ್ಕೆ ₹15 ಲಕ್ಷ ಪರಿಹಾರ ಮಂಜೂರು ಮಾಡುವಂತೆ ಮುಖ್ಯ ಚುನಾವಣಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಮೃತರ ಪತ್ನಿ ಸುಜಾತಾ ಗೋವಿಂದಪ್ಪ ಸಿದ್ದಾಪುರ ಬ್ಯಾಂಕ್ ಖಾತೆಗೆ ಮರಣ ಪರಿಹಾರ ಜಮೆ ಮಾಡುವಂತೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT