ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಸಲ್ಲದು’

Last Updated 19 ನವೆಂಬರ್ 2020, 16:26 IST
ಅಕ್ಷರ ಗಾತ್ರ

ಜಮಖಂಡಿ: ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರೆಸಬಾರದು. ರಾಜಕೀಯ ಬೆರೆತರೆ ಸಂಸ್ಥೆಯ ಆರ್ಥಿಕ ಸ್ಥಿತಿಗತಿ ಮೇಲೆ ಪರಿಣಾಮ ಬೀರಲಿದೆ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.

ಇಲ್ಲಿನ ಬಸವಭವನದಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ನಿಮಿತ್ತ ನಡೆದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಹಕಾರಿ ಕ್ಷೇತ್ರದ ಅಭಿವೃದ್ದಿಗೆ 7 ಸೂತ್ರಗಳಿದ್ದು, ಅವುಗಳನ್ನು ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಸಮರ್ಪಕ ರೀತಿಯಲ್ಲಿ ಪಾಲಿಸಿದರೆ ಸಂಸ್ಥೆಗಳು ಯಶಸ್ಸಿನಹಾದಿಯಲ್ಲಿ ಸಾಗುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕಾಶಿನಾಥ ಹುಡೇದ ಮಾತನಾಡಿ, ನಮ್ಮ ದೇಶದ ಯಾವುದೇ ಮೂಲೆಗೆ ಹೋದರು ಸಹಕಾರಿ ಸಂಘಗಳಿವೆ. ರಾಜ್ಯದಲ್ಲಿ 2018 ಮಾರ್ಚ 31 ರವರೆಗೆ 42,583 ಸಂಘಗಳು ಚಾಲ್ತಿಯಲ್ಲಿವೆ. ಸಹಕಾರಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದವರು ಜನಪ್ರತಿನಿಧಿಗಳಾಗಿ ನಾಯಕರಾಗಿದ್ದಾರೆ ಎಂದರು.

ಕೃಷಿಯೇತರ ಒಕ್ಕೂಟದ ಅಧ್ಯಕ್ಷ ಎನ್.ಎನ್. ಕಡಪಟ್ಟಿ, ಟಿಎಪಿಸಿಎಂಎಸ್ ಅಧ್ಯಕ್ಷ ಏಗಪ್ಪ ಸವದಿ, ಉಪನ್ಯಾಸಕ ಡಾ. ಬಿ.ಬಿ.ಶಿರಡೋಣಿ ಮಾತನಾಡಿದರು. ರಾಜು ಪಿಸಾಳ, ಫಕೀರಸಾಬ ಬಾಗವಾನ, ಸಿದ್ದಣ್ಣ ಬಿಳ್ಳೂರ, ಅಡಿವೆಪ್ಪ ಬಾಳಿಕಾಯಿ, ಧರೆಪ್ಪ ಆಲಗೂರ, ಸುರೇಶ ಹಾದಿಮನಿ, ತಾ.ಪಂ. ಅಧ್ಯಕ್ಷೆ ಸವಿತಾ ಕಲ್ಯಾಣಿ, ಡಿ.ಬಿ.ಪಾಟೀಲ, ಎಸ್.ಡಿ.ಮಾಳಿ, ಶ್ರೀನಿವಾಸ ಸಾರವಾಡ, ಎಸ್.ಎಸ್. ಲಾಯನ್ನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT