ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ

ಜಿಲ್ಲೆಯ ತಲಾ ಐದು ನಗರಸಭೆ, ಪುರಸಭೆ, ಎರಡು ಪಟ್ಟಣ ಪಂಚಾಯ್ತಿಗಳಿಗೆ ಚುನಾವಣೆ ಇಂದು
Last Updated 30 ಆಗಸ್ಟ್ 2018, 14:24 IST
ಅಕ್ಷರ ಗಾತ್ರ

ಬಾಗಲಕೋಟೆ: ಸ್ಥಳೀಯ ಸಂಸ್ಥೆ ಚುನಾವಣೆಗೆ ಮತದಾನ ಪ್ರಕ್ರಿಯೆ ಶುಕ್ರವಾರ ನಡೆಯಲಿದೆ. ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ಮಾಡಬಹುದಾಗಿದೆ.

ಜಿಲ್ಲೆಯಲ್ಲಿ ಬಾಗಲಕೋಟೆ ಸೇರಿದಂತೆ ತಲಾ ಐದು ನಗರ ಹಾಗೂ ಪುರಸಭೆ, ಎರಡು ಪಟ್ಟಣ ಪಂಚಾಯ್ತಿಗಳನ್ನು ಒಳಗೊಂಡ ಜಿಲ್ಲೆಯ 12 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದೆ.

ಮತದಾನಕ್ಕೆ ಅಗತ್ಯ ಸಿದ್ಧತೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದ್ದು, ಗುರುವಾರವೇ ಮತಪೆಟ್ಟಿಗೆಗಳೊಂದಿಗೆ ಚುನಾವಣಾ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಿದರು. ಮತದಾನದ ಸಾಮಗ್ರಿಗಳನ್ನು ಪೂರೈಸಲು ಮಸ್ಟರಿಂಗ್ ಹಾಗೂ ಮತಯಂತ್ರಗಳನ್ನು ವಾಪಸ್ ತರಲು ಡಿ–ಮಸ್ಟರಿಂಗ್ ಕೇಂದ್ರಗಳನ್ನು ಗುರುತಿಸಲಾಗಿದೆ. ಚುನಾವಣಾ ಕರ್ತವ್ಯಕ್ಕಾಗಿ 35 ಬಸ್, 14 ಜೀಪ್, 32 ಮಿನಿಬಸ್ ಹಾಗೂ 28 ಕ್ರೂಸರ್‌ಗಳನ್ನು ಸಿಬ್ಬಂದಿಯೊಂದಿಗೆ ನಿಯೋಜಿಸಲಾಗಿದೆ.

ಚುನಾವಣೆ ನಡೆಯುತ್ತಿರುವ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 4,84,880 ಮತದಾರರಿದ್ದಾರೆ. ಬಾಗಲಕೋಟೆಯಲ್ಲಿ 99,891, ಇಳಕಲ್ 48,679, ಜಮಖಂಡಿ 59,458, ರಬಕವಿ–ಬನಹಟ್ಟಿ 64,665, ಮುಧೋಳ 49,629, ಮಹಾಲಿಂಗಪುರ 31,036, ತೇರದಾಳ 28,149, ಬಾದಾಮಿ 26,693, ಗುಳೇದಗುಡ್ಡ 28,349, ಹುನಗುಂದ 16,880, ಕೆರೂರ 15,951 ಹಾಗೂ ಬೀಳಗಿಯಲ್ಲಿ 15,510 ಮತದಾರರಿದ್ದಾರೆ.

ಬಾಗಲಕೋಟೆ ನಗರಸಭೆಯಲ್ಲಿ 35 ವಾರ್ಡ್‌ಗಳಲ್ಲಿ 92 ಮತಗಟ್ಟೆಗಳು, ಇಳಕಲ್ ನಗರಸಭೆಯಲ್ಲಿ 31 ವಾರ್ಡ್‌ಗೆ 57 ಮತಗಟ್ಟೆ, ಜಮಖಂಡಿ ನಗರಸಭೆಗೆ 31 ವಾರ್ಡ್‌ಗೆ 58 ಮತಗಟ್ಟೆ, ರಬಕವಿ–ಬನಹಟ್ಟಿ ನಗರಸಭೆಗೆ31 ವಾರ್ಡ್‌ಗೆ 67, ಮುಧೋಳ ನಗಸಭೆಗೆ 31 ವಾರ್ಡ್‌ಗೆ 53, ಮಹಾಲಿಂಗಪು ಪುರಸಭೆಯ 23 ವಾರ್ಡ್‌ಗೆ 34, ಪುರಸಭೆ ತೇರದಾಳ 23 ವಾರ್ಡ್‌ಗೆ 30, ಪುರಸಭೆ ಬಾದಾಮಿಯ 23 ವಾರ್ಡ್‌ಗೆ 27, ಗುಳೇದಗುಡ್ಡ ಪುರಸಭೆಯ 23 ವಾರ್ಡ್‌ಗೆ 27, ಹುನಗುಂಡ ಪುರಸಭೆಯ 23 ವಾರ್ಡ್‌ಗೆ 23, ಕೆರೂರ ಪಟ್ಟಣ ಪಂಚಾಯ್ತಿಯ 20 ವಾರ್ಡ್‌ಗೆ 21 ಹಾಗೂ ಬೀಳಗಿ ಪಟ್ಟಣ ಪಂಆಚಾಯ್ತಿಯ 18 ವಾರ್ಡ್‌ಗೆ 18 ಮತಗಟ್ಟೆ ನಿರ್ಮಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 312 ವಾರ್ಡ್‌ಗೆ 507 ಮತಗಟ್ಟೆಗಳನ್ನು ನಿರ್ಮಿಸಿದ್ದು, ಜಿಲ್ಲೆಯ ಒಟ್ಟು 115 ಅತೀ ಸೂಕ್ಷ್ಮ ಮತಗಟ್ಟೆಗಳನ್ನಾಗಿ, 161 ಮತಗಟ್ಟೆಗಳನ್ನು ಸೂಕ್ಷ್ಮ ಕೇಂದ್ರಗಳಾಗಿ ಗುರುತಿಸಿದ್ದು ಅವುಗಳಿಗೆ ಹೆಚ್ಚಿನ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT