ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ: ಕುಡಿಯುವ ನೀರಿಗಾಗಿ ಸಹಾಯವಾಣಿ

Published 21 ಮಾರ್ಚ್ 2024, 15:56 IST
Last Updated 21 ಮಾರ್ಚ್ 2024, 15:56 IST
ಅಕ್ಷರ ಗಾತ್ರ

ಬಾಗಲಕೋಟೆ: ಬಿಸಿಲಿನ ತಾಪದಿಂದ ಕೊಳವೆಬಾವಿಗಳ ನೀರಿನ ಮಟ್ಟ ಕಡಿಮೆಯಾಗಿ ನೀರು ಸರಬರಾಜಿನಲ್ಲಿ ತೊಂದರೆಯಾದರೆ ಕೆಳಕಂಡ ನಂಬರ್‌ಗಳನ್ನು ಸಂಪರ್ಕಿಸಲು ಕೋರಲಾಗಿದೆ.

ನಗರಸಭೆ ಸಹಾಯವಾಣಿ ನಂ.08354-235011, ಕಿರಿಯ ಎಂಜಿನಿಯರ್ ನವೀನ ಖಾಜಿ (97401 02827), ಬಿ.ಎಸ್.ಹಾಲವರ ( 70192 76071) ಹಾಗೂ ಮೇಲ್ವಿಚಾರಕ ಪರಶುರಾಮ ತಳವಾರ (73380 64313) ಸಂಪರ್ಕಿಸಬಹುದು ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.

ನೀರನ್ನು ಮಿತವಾಗಿ ಬಳಸುವದಲ್ಲದೇ, ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿರುವದರಿಂದ ನೀರನ್ನು ಕುದಿಸಿ, ಆರಿಸಿ ಕುಡಿಯಬೇಕು. ಹಲವಾರು ಬಾರಿ ಧ್ವನಿವರ್ಧಕ ಮೂಲಕ ಪ್ರಚಾರ ಮಾಡಿದ್ದರೂ ಸಾರ್ವಜನಿಕರು ನೀರನ್ನು ಪೋಲು ಮಾಡುತ್ತಿರುವುದು ಕಂಡು ಬಂದಿದೆ. ಅಂತವರ ವಿರುದ್ದ ದಂಡ ವಿಧಿಸಿ ಅವರ ನಳದ ಜೋಡಣೆ ಬಂದ್ ಮಾಡಲಾಗುವುದು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT