ಬಾಗಲಕೋಟೆ: ಭಾರತೀಯ ಶಿಲ್ಪಕಲಾ ಕೌಶಲಕ್ಕೆ ಅಪಾರ ಕೊಡುಗೆಯನ್ನು ನೀಡಿ, ಕಲೆಗಳನ್ನು ಜೀವಂತವಾಗಿರಿಸಿದವರು ಅಮರಶಿಲ್ಪಿ ಜಕಣಾಚಾರಿ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.

ನವನಗರದ ಅಂಬೇಡ್ಕರ್ ಸಭಾಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಸೇರಿದಂತೆ ವಿಶ್ವದ ವಿವಿಧ ಕಡೆಗಳಲ್ಲಿ ಜಕಣಾಚಾರಿಗಳ ಶಿಲ್ಪಕಲೆಗಳು ಇಂದಿಗೂ ಜೀವಂತವಾಗಿವೆ. ಶಿಲ್ಪಕಲೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಬೇಲೂರು, ಹಳೆಬೀಡು, ಸೋಮನಾಥಪುರ ದೇವಾಲಯಗಳಲ್ಲಿನ ಶಿಲ್ಪಕಲೆಗಳು ಇಂದಿಗೂ ಜೀವಂತವಾಗಿವೆ. ಅಂತಹ ಶಿಲ್ಪಕಲೆ ನೋಡುವ ಭಾಗ್ಯ ದೊರೆತಿದೆ. ಇಂತಹ ವೈವಿಧ್ಯಮಯ ಕಲೆಯಿಂದ ಕೂಡಿದ ಶಿಲ್ಪಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸವಾಗಬೇಕಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮುದಾಯವರು ಅಭಿವೃದ್ಧಿ ಹೊಂದಬೇಕು ಎಂದರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ಸೃಷ್ಟಿಗೆ ಕಾರಣರಾದ ವಿಶ್ವಕರ್ಮರು ತಮ್ಮ ಶಿಲ್ಪಕಲೆಯನ್ನು ನಾಡಿಗೆ ನೀಡಿದ್ದಾರೆ. ಕಲೆಯ ಮೂಲಕ ನಾಜೂಕಾದ ಹಲವು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿ ಇವರಾಗಿದ್ದಾರೆ ಎಂದರು.

ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಜಕಣಾಚಾರಿ ಎಂದರೆ ಕಲ್ಲಿನಲ್ಲಿ ಪ್ರಾಣ ತುಂಬಿದ ಅಮರಶಿಲ್ಪಿ. ಹೊಯ್ಸಳ ಯುಗದ ವೈಭವಶಾಲಿ ವಾಸ್ತುಶಿಲ್ಪದಲ್ಲಿ ಅವರ ಕೈಚಳಕ, ಅವರ ದೃಷ್ಟಿ, ಶಿಸ್ತು ಕಾಣುತ್ತದೆ. ಇವೆಲ್ಲವೂ ಅಮರಶಿಲ್ಪಿ ಜಕಣಾಚಾರಿಯಂತಹ ಶಿಲ್ಪಿಗಳ ತಪಸ್ಸಿನ ಫಲವಾಗಿವೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ ದಡ್ಡಿ ಮಾತನಾಡಿ, 12-13ನೇ ಶತಮಾನದಲ್ಲಿ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ಇತ್ತು. ಇದರಿಂದಲೇ ಶಿಲ್ಪಕಲೆಯಲ್ಲಿ ಅಪಾರ ಕೊಡುಗೆ ನೀಡಲು ಜಕಣಾಚಾರಿಯವರಿಗೆ ಸಾಧ್ಯವಾಯಿತು. ಅದನ್ನು ಉಳಿಸಿಕೊಂಡು ಹೋಗುವ ಹೊಣೆ ಇಂದಿನ ಯುವಕರ ಮೇಲೆ ಇದೆ ಎಂದರು.

ಉಪನ್ಯಾಸ ನೀಡಿದ ಸುತಗುಂಡಾರ ಎಸ್.ಕೆ.ಪ್ರೌಢಶಾಲೆಯ ಮುಖ್ಯಶಿಕ್ಷಕ ಅಪ್ಪಾಸಾಬ ಬಡಿಗೇರ, ಪ್ರಪಂಚದ ಎಲ್ಲ ವಿದ್ಯೆಗಳ ಮೂಲವಾಗಿರುವ ಜಕಣಾಚಾರಿ ಅವರನ್ನು ಜಗತ್ತಿನ ಮೊದಲ ಎಂಜಿನಿಯರ್ ಎನ್ನಬಹುದಾಗಿದೆ. ಜಕಣಾಚಾರಿಯವರ ಶಿಲ್ಪಕಲೆ ಜಗತ್ತಿನ ಎಲ್ಲಡೆ ಪಸರಿಸಿರುವ ಮೂಲಕ ನಾಡನ್ನು ಶ್ರೀಮಂತವನ್ನಾಗಿ ಮಾಡಿದೆ ಎಂದು ಹೇಳಿದರು.

ಮಳೆಯರಾಜೇಂದ್ರ ಮಠದ ಜಗನ್ನಾಥ ಶ್ರೀ, ನಾಲತವಾಡದ ಸುಧೀಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ, ಸಮುದಾಯ ಮುಖಂಡ ಮೌನೇಶ ಬಡಿಗೇರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.