ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಳಗೇರಿ ಕ್ರಾಸ್ | ‘ಕನ್ನಡಕ್ಕೆ ಶಕ್ತಿ ತುಂಬುವ ಕೆಲಸವಾಗಲಿ‘

Published 9 ನವೆಂಬರ್ 2023, 15:55 IST
Last Updated 9 ನವೆಂಬರ್ 2023, 15:55 IST
ಅಕ್ಷರ ಗಾತ್ರ

ಕುಳಗೇರಿ ಕ್ರಾಸ್: 'ಕನ್ನಡ ನಾಡು, ನುಡಿ ಉಳಿಯಲು ಹಾಗೂ ಕನ್ನಡ ಭಾಷೆ ಅಳಿವು ಉಳಿವಿನಲ್ಲಿ ನಮ್ಮ ಪೂರ್ವಜರಾದ ಆಲೂರು ವೆಂಕಟರಾಯರು, ದೇಶಪಾಂಡೆ, ಹರ್ಡೆಕರ ಮಂಜಪ್ಪ ಸೇರಿದಂತೆ ಹಲವಾರು  ಮಹಾನ್ ವ್ಯಕ್ತಿಗಳ ಪರಿಶ್ರಮವಿದೆ’ ಎಂದು ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ತಿಳಿಸಿದರು.

ರಾಜ್ಯೋತ್ಸವ ಹಾಗೂ ವಾರ್ಷಿಕೋತ್ಸವದ ಅಂಗವಾಗಿ ಗ್ರಾಮದ ಎಂ.ಎಲ್.ಬಿ.ಸಿ ಆವರಣದಲ್ಲಿ ಮಂಗಳವಾರ ನಡೆದ ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಹಾಲು ಒಕ್ಕೂಟದ ನಿರ್ದೇಶಕ ಈರನಗೌಡ ಕರಿಗೌಡ್ರ ಮಾತನಾಡಿ, ‘ನಮ್ಮ ಮಾತ್ರ ಭಾಷೆ ಎಂದರೆ ನಮ್ಮನ್ನು ಹೆತ್ತ ತಂದೆ ತಾಯಂದಿರನ್ನು ಎಷ್ಟು ಗೌರವಿಸುತ್ತವೆಯೋ ಹಾಗೆಯೇ ನಮ್ಮ ಭಾಷೆಯನ್ನು ಅಷ್ಟೆ ಗೌರವಿಸಬೇಕು’ ಎಂದು ತಿಳಿಸಿದರು.

ಸೋಮನಕೊಪ್ಪ ಪೂರ್ಣಾನಂದ ಮಠದ ನೀಲಲೋಹಿತ ಸ್ವಾಮಿಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು, ತಾಲ್ಲೂಕು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಹನುಮಂತಗೌಡ ಯಕ್ಕಪ್ಪನವರ, ರಾಜ್ಯ ಜಾನಪದ ಕಲಾ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀಕಾಂತಗೌಡ ಗೌಡರ ಮಾತನಾಡಿದರು.

ವೆಂಕಣ್ಣ ಹೊರಕೇರಿ, ಬೀರಪ್ಪ ಪೆಂಟಿ, ಸುರೇಶ ಹೆರಕಲ್, ಮಲ್ಲಿಕಾರ್ಜುನ ಹಿರಗಣ್ಣವರ, ಕಾಕನೂರ ಗ್ರಾ.ಪಂ ಅಧ್ಯಕ್ಷ ಮುತ್ತಪ್ಪ ಗಾಜಿ, ನಿಜಾಮುದ್ದಿನ್ ನರಗುಂದ, ಹನುಮಂತ ನರಗುಂದ, ಮಾರುತಿ ತಳವಾರ, ಪಿಡಿಓ ಎಸ್.ಜಿ.ಪರಸಣ್ಣವರ, ನೀರಾವರಿ ಇಲಾಖೆಯ ಎಇಇ ಎಸ್.ಎಲ್.ಪಿಂಜಾರ, ಸಣ್ಣಬೀರಪ್ಪ ದ್ಯಾವನಗೌಡ್ರ, ರಾಮನಗೌಡ ದ್ಯಾವನಗೌಡ್ರ, ಶೇಖಪ್ಪ ಪವಾಡಿನಾಯ್ಕರ, ಲಕ್ಷ್ಮಣ ದಾದನಟ್ಟಿ, ಬಸವರಾಜ ಎತ್ತಿನಮನಿ, ವೈ.ಎಂ.ಹಡಪದ, ಅಬ್ದುಲ್ ನದಾಫ, ವಿ.ಎಸ್ ಮಿಟ್ಲಕೋಡ, ಸಂಗಮೇಶ ಕಂಬಾರ  ಉಪಸ್ಥಿತರಿದ್ದರು.

ಭಾರತೀಯ ಸೇನೆಯ ನಿವೃತ್ತ ಯೋಧರಾದ ಹನುಮಂತ ದ್ಯಾವನಗೌಡ್ರ, ಸಿದ್ದಪ್ಪ ದ್ಯಾವನ ಗೌಡ್ರ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT