ಮಂಗಗಳ ದಾಳಿ: ಇಬ್ಬರಿಗೆ ಗಾಯ

7

ಮಂಗಗಳ ದಾಳಿ: ಇಬ್ಬರಿಗೆ ಗಾಯ

Published:
Updated:

ಕಮತಗಿ (ಬಾಗಲಕೋಟೆ): ಪಟ್ಟಣದಲ್ಲಿ ಮಂಗಗಳು ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ಮಾಡಿದ್ದು, ಇದರಿಂದ ಕಮತಗಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಕಮತಗಿಯ ಹುಚ್ಚೇಶ್ವರ ಪ್ರೌಢಶಾಲೆಯ ಕರಣಿಕ ಶಿವಾನಂದ ಇಟಗಿ ಅವರ ಎಡಭಾಗದ ಕೈಗೆ ಮಂಗ ಕಚ್ಚಿದ್ದರ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ.

ನಿನ್ನೆ ದಿನ ಬಸ್ ಕಂಡಕ್ಟರ್ ರಮೇಶ್ ಉಕ್ಕಲಿ ಎಂಬುವರ ಮೇಲೆಯೂ ಮಂಗ ದಾಳಿ ಮಾಡಿದೆ. ಒಂದೇ ಮಂಗ ಕಳೆದ ಮೂರ್ನಾಲ್ಕು ದಿನಗಳಿಂದ ಕಂಡ ಕಂಡವರ ಮೇಲೆ ದಾಳಿ ಮಾಡುತ್ತಿದ್ದು ಕಮತಗಿಯ ಜನತೆ ನಮ್ಮ ಮೇಲೆ ಮಂಗ ದಾಳಿ ಮಾಡಿತು ಎಂಬ ಭಯದಲ್ಲೇ ದಿನದೂಡುತ್ತಿದ್ದಾರೆ. ಕಮತಗಿಯ ಹೊರ ವಲಯದ ವಾರಿ ಆಂಜನೇಯ ದೇವಸ್ಥಾನದ ಸುತ್ತಮೂತ್ತಲಿನ ಪ್ರದೇಶ ಹೆಚ್ಚಾಗಿ ಕಂಡು ಬರುತ್ತದೆ.

ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮಂಗವನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟು ಬರುವ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಸಾರ್ವಜನಿಕರು ಒತ್ತಾಯಿಸಿದ್ಥಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !