ಮುಧೋಳ: ಬಿಜೆಪಿಯಿಂದ ಉಚ್ಚಾಟಣೆಗೊಂಡ ಸಹಕಾರಿ ಧುರೀಣ ರಾಮಣ್ಣ ತಳೇವಾಡ ಅವರ ಮುಂದಾಳತ್ವದಲ್ಲಿ ನಡೆದ ಮಾಚಕನೂರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ಶುಕ್ರವಾರ ನಡೆಯಿತು.
ರಾಮಣ್ಣ ತಳೇವಾಡ ಅವರ ಬೆಂಬಲಿಗರಾದ ಹಿರೇಆಲಗುಂಡಿಯ ಸದಸ್ಯ ಬಸವರಾಜ ಚಿಪ್ಪಲಕಟ್ಟಿ ಅಧ್ಯಕ್ಷರಾಗಿ ಹಾಗೂ ಮಾಚಕನೂರಿನ ಸದಸ್ಯೆ ಮಹಾದೇವಿ ದುಮ್ಮಾಳೆ ಉಪಾಧ್ಯಕ್ಷರಾಗಿ ಆಯ್ಕೆಯಾದರು.
‘ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಶುಕ್ರವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಎರಡೂ ಸ್ಥಾನಕ್ಕೆ ತಲಾ ಒಂದೇ ನಾಮಪತ್ರ ಸಲ್ಲಿಕೆಯಾದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಯಿತು’ ಎಂದು ರಿಟರ್ನಿಂಗ್ ಆಫೀಸರ್ ಸಂಜೀವ ಹಿಪ್ಪರಗಿ ತಿಳಿಸಿದ್ದಾರೆ.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಮದ ಮುಖಂಡರು ಸಿಹಿ ತಿನ್ನಿಸಿ, ಸನ್ಮಾನಿಸಿ, ಅಭಿನಂದಿಸಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಭೀಮನಗೌಡ ಪಾಟೀಲ, ಸಿದ್ದು ಸೊನ್ನದ, ಲಕ್ಕಪ್ಪ ಕರೋಲಿ ಹಾಗೂ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಕವಿತಾ ಮಂಟೂರ, ಕಾರ್ಯದರ್ಶಿ ವೆಂಕಣ್ಣ ಬಿದರಿ ಸೇರಿದಂತೆ ಇತರರು ಇದ್ದರು.