ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿಗಾಗಿ ಅರ್ಜಿ ಹಾಕಿದವನಲ್ಲ: ಶಂಭು ಬಳಿಗಾರ

Last Updated 19 ಆಗಸ್ಟ್ 2022, 5:14 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಪ್ರಶಸ್ತಿಗಾಗಿ ನಾನು ಯಾವತ್ತೂ ಅರ್ಜಿ ಹಾಕಿದವನಲ್ಲ. ಇದು ನನಗೆ ಅನಿರೀಕ್ಷಿತ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಯಿಂದ ತಜ್ಞರ ವಿಭಾಗದಲ್ಲಿ ಡಾ.ಬಿ.ಎಸ್‌. ಗದ್ದಗಿಮಠ ಪ್ರಶಸ್ತಿ ಪುರಸ್ಕೃತರಾಗಿರುವ ಡಾ.ಶಂಭು ಬಳಿಗಾರ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.

‘ಗ್ರಾಮೀಣ ಜಾನಪದ ಸಂಸ್ಕೃತಿಯ ಮಧ್ಯದಲ್ಲಿ ಬೆಳೆದಿದ್ದೇನೆ. ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಮಾಡಿ, ಜಾನಪದವನ್ನು ಉಸಿರಾಗಿಸಿಕೊಂಡಿದ್ದೇನೆ.ನೆಲಮೂಲದ ಕನ್ನಡದ ಜಾನಪದ ಸಂಸ್ಕೃತಿಯನ್ನು, ಗ್ರಾಮೀಣ ಕೃಷಿ ಬದುಕಿನ ಆಚರಣೆಗಳನ್ನು ವಿದೇಶಿ ನೆಲಕ್ಕೂ ಪರಿಚಯಿಸಿದ ಹೆಮ್ಮೆ ಇದೆ’ ಎಂದರು.

ಪರಿಚಯ: ಗದಗ ತಾಲ್ಲೂಕಿನ ಶಿರಹಟ್ಟಿ ತಾಲ್ಲೂಕಿನ ಶಿಗ್ಲಿಯಲ್ಲಿ ಹುಟ್ಟಿದ ಬಳಿಗಾರ ಅವರು, ಇಳಕಲ್‌ ಅನ್ನು ಕರ್ಮಭೂಮಿ
ಯನ್ನಾಗಿಸಿಕೊಂಡರು. 1975ರಲ್ಲಿ ಇಳಕಲ್‌ನ ವಿಜಯ ಮಹಾಂತೇಶ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾಗಿದ್ದಾರೆ.

ಧ್ವನಿಸುರುಳಿಗಳ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ಅವರು, ತೊಗರಿ ತಿಪ್ಪ, ನುಚ್ಚಿನ ಮಲ್ಲಯ್ಯ, ಹಾಲುಂಡ ತವರು, ಗೋದಿ ಹುಗ್ಗಿ ಗಂಗಯ್ಯ ಸೇರಿದಂತೆ ಹಲವು ಅವರ ಧ್ವನಿ ಸುರುಳಿ ಬಂದಿವೆ.

ಹೂವ ತಂದವರು, ಬಿಚ್ಚಿ ಬಿದ್ದಾವ ಜೋಳ, ಜೋಳದರಾಶಿ ದೊಡ್ಡನಗೌಡರು ಕೃತಿಗಳ ರಚನೆ ಜೊತೆಗೆ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಗೌರವ ಸನ್ಮಾನ, ಬಾಗಲಕೋಟೆ ಜಿಲ್ಲಾಡಳಿತದ
ಕನ್ನಡ ರಾಜ್ಯೋತ್ಸವ, ಜಾನಪದ ಕಲಾಶ್ರೀ ಪ್ರಶಸ್ತಿ, ಬಸವಗುರು ಕಾರುಣ್ಯ ಪ್ರಶಸ್ತಿ ಸೇರಿದಂತೆ ಹಲವು ಹಲವು ಪ್ರಶಸ್ತಿಗಳಿಗೆ
ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT