ಬಾದಾಮಿ: ಬೆಟ್ಟದ ಪರಿಸರದಲ್ಲಿ ಬೃಹತ್ ಎತ್ತರದ ಸಾಲು ಬಂಡೆಗಳನ್ನು ಹತ್ತುವ ಸಾಹಸ ಕ್ರೀಡೆಗೆ ಸ್ವದೇಶಿ ಹಾಗೂ ವಿದೇಶಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಬೆಟ್ಟ ಹತ್ತುವ ಸಾಹಸಿಗಳಿಗೆ ಇಲ್ಲಿ ಪ್ರಾಣ ರಕ್ಷಣೆ ಬೇಕಿದೆ.

ಬಾದಾಮಿಯಲ್ಲಿ ಎತ್ತರದ, ಆಕರ್ಷಕ ಬೆಟ್ಟಗಳನ್ನು ಹತ್ತುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಗಳು ಹೆಚ್ಚು ಹರಿದಾಡುವುದರಿಂದ ಅಧಿಕ ಸಂಖ್ಯೆಯ ಸ್ವದೇಶಿ ಮತ್ತು ವಿದೇಶಿ ಸಾಹಸಿಗರು ಇಲ್ಲಿಗೆ ಆಗಮಿಸುತ್ತಾರೆ.

ರಂಗನಾಥ ಬೆಟ್ಟದ ಸಮೀಪ ಗಣೇಶ, ಪಾವರ್ ಸ್ಟಾರ್ ಏರಿಯಾ, ಹೆಸ್ಕಾಂ ಕಾರ್ಯಾಲಯದ ಹಿಂದಿನ ಬೆಟ್ಟದ ಸಾಲುಗಳಿಗೆ ಡಿಲಕ್ಸ್, ಟೆಂಪಲ್ ಏರಿಯಾ ಎಂದು ಹೆಸರಿಸಲಾಗಿದೆ. ಇಲ್ಲಿ ಬೆಟ್ಟ ಹತ್ತುವ ಸಾಹಸ ಕ್ರೀಡೆಗಳು ನಡೆಯುತ್ತವೆ.

ಅಮೆರಿಕದ ಮಹಿಳೆಯೊಬ್ಬರು ಹಗ್ಗದ ಸಹಾಯದಿಂದ ಬೆಟ್ಟವನ್ನು ಹತ್ತುವಾಗ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಘಟನೆ ಈಚೆಗೆ ನಡೆದಿತ್ತು.

ಬೆಟ್ಟ ಹತ್ತುವ ಸಾಹಸ ಕ್ರೀಡೆಗಳು ನಡೆಯುವ ಸ್ಥಳವು ಮುಖ್ಯ ರಸ್ತೆಯ ಎಪಿಎಂಸಿ ಆವರಣದಿಂದ ಅಂದಾಜು 300 ಮೀ. ದೂರ ಇದೆ. ಬೆಟ್ಟ ಹತ್ತುವಾಗ ಆಕಸ್ಮಿಕವಾಗಿ ಯಾರಾದರೂ ಬಿದ್ದರೆ ಅವರನ್ನು ಹೊತ್ತುಕೊಂಡು ಬೆಟ್ಟದಿಂದ ನೂರಾರು ಮೆಟ್ಟಿಲುಗಳ ಮೂಲಕ ಕೆಳಗೆ ತರಬೇಕು. ಇಲ್ಲಿ ಯಾವುದೇ ವಾಹನಗಳು ಸಂಚರಿಸುವುದಿಲ್ಲ.

‘ಯುವ ಸಬಲೀಕರಣ ಕ್ರೀಡಾ ಇಲಾಖೆಯ ಜನರಲ್ ತಿಮ್ಮಯ್ಯ ಅಕಾಡೆಮಿ ಮತ್ತು ಬೆಟ್ಟ ಹತ್ತುವ ತರಬೇತಿ ಪಡೆದ ಗುರುತಿನ ಚೀಟಿ ಹೊಂದಿದ ಯುವಕರು ತರಬೇತಿ ನೀಡುತ್ತಿದ್ದಾರೆ’ ಎಂದು ಕ್ರೀಡಾ ಇಲಾಖೆಯ ಜನರಲ್ ತಿಮ್ಮಯ್ಯ ಅಕಾಡೆಮಿ ವ್ಯವಸ್ಥಾಪಕ ರಾಜೇಂದ್ರ ಪ್ರತಿಕ್ರಿಯಿಸಿದರು.

‘ರಾಜ್ಯ ಮತ್ತು ವಿವಿಧ ದೇಶಗಳಿಂದ ಆಗಮಿಸುವ ಬೆಟ್ಟ ಹತ್ತುವ ಶಿಬಿರಾರ್ಥಿಗಳ ಕುರಿತು ತರಬೇತಿಗೆ ಮೊದಲೇ ಆರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ತಿಳಿಸುತ್ತೇವೆ’ ಎಂದರು.

‘ಸ್ವದೇಶ ಮತ್ತು ವಿದೇಶಗಳಿಂದ ಅನೇಕ ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ವೃದ್ಧರು ಬೆಟ್ಟ ಹತ್ತುವುದಕ್ಕೆ ಬರುತ್ತಾರೆ. ಅವರು ಯಾರು, ಎಲ್ಲಿಂದ ಬಂದಿದ್ದಾರೆ ಎಂಬ ಕ್ರೀಡಾ ಸಾಹಸಿಗರ ಮಾಹಿತಿಯನ್ನು ಐ.ಡಿ ಕಾರ್ಡ್ ಹೊಂದಿದ ತರಬೇತಿ ಕೊಡುವವರು, ಹೋಮ್ ಸ್ಟೇದವರು ಕ್ರೀಡಾ ಇಲಾಖೆಯ ತಿಮ್ಮಯ್ಯ ಅಕಾಡೆಮಿಗೆ ಮತ್ತು ಅರಣ್ಯ ಇಲಾಖೆಗೆ ಕೊಡಬೇಕಾಗುತ್ತದೆ’ ಎಂದು ಹೇಳಿದರು.

ಬೆಟ್ಟ ಹತ್ತುವ ಸಾಹಸ ಕ್ರೀಡೆಗೆ ಸರ್ಕಾರ ಯುವಜನ ಸೇವಾ ಕ್ರೀಡಾ ಇಲಾಖೆಯ ಯುವ ಸಬಲೀಕರಣ ಇಲಾಖೆಯಿಂದ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯನ್ನು 1997ರಲ್ಲಿಯೇ ಆರಂಭಿಸಲಾಗಿದೆ. ಸಾವಿರಾರು ಯುವಕರು ಇಲ್ಲಿ ಬೆಟ್ಟ ಹತ್ತುವ ಸಾಹಸವನ್ನು ಮೆರೆದಿದ್ದಾರೆ.

ಗುರುತಿನ ಚೀಟಿ ಹೊಂದಿದವರೇ ತರಬೇತಿ ನೀಡಬೇಕು ಬೆಟ್ಟ ಹತ್ತುವ ಸಾಹಸಿಗರ ಮಾಹಿತಿ ಅವಶ್ಯ ಬೆಳಿಗ್ಗೆ 6 ರಿಂದ ಸಂಜೆ 6.30ಕ್ಕೆ ರಾಕ್ ಕ್ಲೈಂಬಿಂಗ್

ರಂಗನಾಥ ಬೆಟ್ಟದ ಸುತ್ತ 8 ಎಕರೆ ಪ್ರದೇಶವು 1935ರಲ್ಲಿಯೇ ಡಿನೋಟಿಫೈಡ್ ಆಗಿದೆ. ರಾಕ್ ಕ್ಲೈಂಬಿಂಗ್ ನಮಗೆ ಸಂಬಂಧಿಸಿದ್ದು ಅಲ್ಲ
ಮಹೇಶ ಮರಿಯನ್ನರ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಅಧಿಕಾರಿ