ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ: ಶೇ 80ರಷ್ಟು ಮತದಾನ

Last Updated 21 ಏಪ್ರಿಲ್ 2014, 6:52 IST
ಅಕ್ಷರ ಗಾತ್ರ

ಮುಧೋಳ: ತಾಲ್ಲೂಕಿನ ತಿಮ್ಮಾಪುರ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭಾನುವಾರ ಚುನಾವಣೆ ನಡೆಯಿತು.

ಒಟ್ಟು 17 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 36 ಜನ ತಮ್ಮ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದು ಸಾಮಾನ್ಯ 22, ಹಿಂದುಳಿದ ವರ್ಗ 2, ಪರಿಶಿಷ್ಟ ಜಾತಿ/ಪಂಗಡ 4, ಮಹಿಳಾ 4, ಡ ವರ್ಗ 2 ಹಾಗೂ ಬ ವರ್ಗ 2 ಸ್ಥಾನಗಳಿಗೆ ಅಂತಿಮವಾಗಿ ಸ್ಪರ್ಧಾಕಣದಲ್ಲಿ  ಇದ್ದಾರೆ.

ಬೆಳಿಗ್ಗೆ 9 ರಿಂದ 4ರವರೆಗೆ ನಡೆದ ಚುನಾವಣೆ ಅತ್ಯಂತ ಬಿರುಸಿನಿಂದ ಕೂಡಿತ್ತು. ಅಲ್ಲಲ್ಲಿ ಮಾತಿನ ಚಕಮುಕಿ ನಡೆಯಿತು. ಸುಡು ಬಿಸಿಲಲ್ಲೂ ಮತದಾರರು  ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಹಿಳಾ ಮತದಾರರು ನಾವೇನೂಕಡಿಮೆ ಇಲ್ಲ ಎಂಬುದನ್ನು ನಿರೂಪಿಸಿದರು. ಶೇ 80ರಷ್ಟು  ಮತದಾನ­ವಾಯಿತು. ಅ ವರ್ಗದಲ್ಲಿ 16,279 ಜನರು ಮತದಾನ ಹಕ್ಕನ್ನು ಹೊಂದಿದ್ದರು. ಇದರಲ್ಲಿ 12, 850 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು. ಬ ವರ್ಗದಲ್ಲಿ 66 ಮತದಾರರ ಪೈಕಿ 64 ಮತದಾರರು ಮತದಾನ ಮಾಡಿದರು. ಡ ವರ್ಗದಲ್ಲಿ 433 ಮತದಾರ­ರಲ್ಲಿ 377 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು.

ಶಾಸಕ ಗೋವಿಂದ ಕಾರಜೋಳ, ಲೋಕಸಭೆ ಕಾಂಗ್ರಸ್ ಅಭ್ಯರ್ಥಿ ಅಜಯಕುಮಾರ ಸರನಾಯಕ, ಮಾಜಿ ಸಚಿವ ಆರ್.ಬಿ. ತಿಮ್ಮಾ­ಪುರ, ಮಾಜಿ ಶಾಸಕ ಸಿದ್ದು ಸವದಿ ಹಿರಿಯ ವಕೀಲ ತುಳಸಿಗೇರಿ  ಮತಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT