ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ರಂಗನಾಥಸ್ವಾಮಿ ಜಾತ್ರೆ

Last Updated 3 ಏಪ್ರಿಲ್ 2013, 9:14 IST
ಅಕ್ಷರ ಗಾತ್ರ

ಗುಳೇದಗುಡ್ಡ: ತಾಲ್ಲೂಕಿನ ಕೆಲವಡಿ ಗ್ರಾಮದ ಐತಿಹಾಸಿಕ ಕ್ಷೇತ್ರ ಲಕ್ಷ್ಮೀ ರಂಗನಾಥಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವದ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಾಗರದಲ್ಲಿ ಸಡಗರ ಸಂಭ್ರಮದೊಂದಿಗೆ ಜರುಗಲಿದೆ.

ಅಂದು ಮಂಗಳವಾರ ಬೆಳಿಗ್ಗೆ ಲಕ್ಷ್ಮೀ ರಂಗನಾಥ ಸ್ವಾಮಿ ದೇವರ ಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರದ ಪೂಜೆ ಹಾಗೂ ಕನಕರಾಯರನ ಮೂರ್ತಿಗೆ ಸೋಮ ರಸದ ನೈವೇದ್ಯ ಮಾಡಿದ ಬಳಿಕ ಲಕ್ಷ್ಮೀ ರಂಗನಾಥ ಸ್ವಾಮಿ ಕಳಸ, ಹಗ್ಗದ ಮೆರವಣಿಗೆ ನಡೆದು ಸಂಜೆ ರಥೋತ್ಸವ ನಡೆಯಿತು.

ರಥೋತ್ಸವದಲ್ಲಿ ಕೆಲವಡಿ ಗ್ರಾಮದ ಹೊನ್ನಪ್ಪಗೌಡ ಗೌಡರ, ರಂಗನಗೌಡ ಬಸವನಗೌಡ ಗೌಡರ, ರಂಗನಗೌಡ ಶಿವನಗೌಡ ಗೌಡರ, ಹೊಳಬಸಪ್ಪ ಕಟಗಿ, ಕೆ.ಎಂ.ಪೂಜಾರ, ಕೆ.ಟಿ. ಪಾಟೀಲ, ಶಿವಪ್ಪ ತಳವಾರ, ರಂಗಪ್ಪ ಸಣ್ಣನಿಂಗಪ್ಪ ತಳವಾರ, ಅರ್ಚಕ ಪವಾಡೆಪ್ಪ ಅರಳಿ, ಹಾಗೂ ಜಿ.ಪಂ. ಉಪಾಧ್ಯಕ್ಷ ಕೃಷ್ಣಾ ಓಗೆನ್ನವರ, ಹಾಸಲಕರ ಮುಂತಾದವರು ನೇತೃತ್ವದಲ್ಲಿ ಜಾತ್ರೆ ಸಾಂಗವಾಗಿ ನೆರೆವೇರಿತು.

ಹಂಸನೂರ, ಲಿಂಗಾಪುರ, ಗುಳೇದ ಗುಡ್ಡ, ತಿಮ್ಮಸಾಗರ, ತೋಗುಣಸಿ, ತೆಗ್ಗಿ, ರೇಲ್ವೆ ಸ್ಟೇಶನ್, ಖಾಜಿಬೂದಿಹಾಳ, ಕೋಟೆಕಲ್, ಮುರುಡಿ, ಹಾನಾಪುರ. ರಾಘಾಪುರ, ಶಿರೂರು ಸೇರಿದಂತೆ ಹಾಗೂ ಸುತ್ತ ಮುತ್ತಲಿನ ಗ್ರಾಮದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.ರಾತ್ರಿ ಲಕ್ಷ್ಮೀರಂಗನಾಥ ನವ ತರುಣ ನಾಟ್ಯ ಸಂಘದವರಿಂದ `ಸೇಡಿಟ್ಟ ಶ್ರೀರಾಮ' ಎಂಬ ಸಾಮಾಜಿಕ ನಾಟಕ ಪ್ರದರ್ಶನ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT