ಹೊಸಪೇಟೆ: ‘ಹಂಪಿ ಉತ್ಸವ’ದ ಪ್ರಯುಕ್ತ ಈ ಸಲ ಮತ್ಸ್ಯ ಮೇಳ ಆಯೋಜಿಸಲಾಗಿದೆ.

ಮೀನುಗಾರಿಕೆ ಇಲಾಖೆಯು ಹಂಪಿ ಗ್ರಾಮ ಪಂಚಾಯಿತಿ ಎದುರಿನ ಮಾತಂಗ ಪರ್ವತ ಮೈದಾನದಲ್ಲಿ ಮೇಳ ಹಮ್ಮಿಕೊಂಡಿದ್ದು, ಜ. 10ರಂದು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳ್ಳಲಿದೆ.

11 ಅಡಿ ಸುರಂಗ ಮಾದರಿಯ ಅಕ್ವೇರಿಯಂ ನಿರ್ಮಿಸಲಾಗಿದೆ. 50ಕ್ಕಿಂತ ಹೆಚ್ಚು ಫಿಶ್‌ಟ್ಯಾಂಕ್‌ಗಳನ್ನು ತಯಾರಿಸಲಾಗಿದೆ. 15 ಬಗೆಯ ಮೀನುಗಳನ್ನು ಸಾರ್ವಜನಿಕರು ವೀಕ್ಷಿಸಬಹುದು.

ಬೈ ಸ್ಕೈಗೆ ಚಾಲನೆ:ಹಂಪಿ ಬೈ ಸ್ಕೈಗೆ ಶಾಸಕ ಆನಂದ್ ಸಿಂಗ್ ಬುಧವಾರ ತಾಲ್ಲೂಕಿನ ಕಮಲಾಪುರದಲ್ಲಿ ಚಾಲನೆ ನೀಡಿದರು. ಆರು ಜನ ಕುಟುಂಬ ಸದಸ್ಯರೊಂದಿಗೆ ಮೊದಲ ಪಯಣ ಬೆಳೆಸಿ, ಬಾನಂಗಳದಿಂದ ಹಂಪಿ ವೀಕ್ಷಿಸಿದರು.

‘ಮೊದಲ ಸಲ ಕುಟುಂಬದೊಂದಿಗೆ ಹೆಲಿಕ್ಯಾಪ್ಟರ್‌ನಲ್ಲಿ ಹಂಪಿ ನೋಡಿದೆ. ಮೇಲಿಂದ ಹಂಪಿ ನೋಡಲು ಬಹಳ ಸುಂದರವಾಗಿ ಕಾಣುತ್ತದೆ’ ಎಂದು ಸಿಂಗ್ ಹೇಳಿದರು.

ಜ. 8ರಿಂದ 12ರ ವರೆಗೆ ಬೈ ಸ್ಕೈ ನಡೆಯಲಿದ್ದು, ಚಿಪ್ಸನ್ ಮತ್ತು ‘ತುಂಬೆ’ ಏವಿಯೇಷನ್ ಹೆಲಿಕ್ಯಾಪ್ಟರ್‌ಗಳಿಗೆ ವ್ಯವಸ್ಥೆ ಮಾಡಲಾಗಿದೆ. ಏಳು ನಿಮಿಷಗಳ ಹಂಪಿ ವೀಕ್ಷಣೆಗೆ ತಲಾ ₹3,000 ದರ ನಿಗದಿ ಪಡಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮೋತಿಲಾಲ್ ಲಮಾಣಿ, ತಹಶೀಲ್ದಾರ್ ಎಚ್. ವಿಶ್ವನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.