ಬಳ್ಳಾರಿ: ಬಳ್ಳಾರಿಯ ಸಿಇಎನ್ (ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ) ಠಾಣೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಹುದ್ದೆ ಮೂರು ತಿಂಗಳಿಂದ ಖಾಲಿ ಉಳಿದಿದ್ದು, ನಾಯಕನಿಲ್ಲದಂತಾಗಿದೆ.

ಡಿಎಸ್ಪಿಯಾಗಿದ್ದ ಸಂತೋಷ್ ಚೌಹಾಣ್ 2025ರ ನವೆಂಬರ್ನಲ್ಲಿ ವರ್ಗಾವಣೆಗೊಂಡರು. ಠಾಣೆಯ ಹೊಣೆಗಾರಿಕೆಯನ್ನು ಇನ್ಸ್ಪೆಕ್ಟರ್ವೊಬ್ಬರಿಗೆ ವಹಿಸಲಾಯಿತು. ಆವರು ಅನಾರೋಗ್ಯದ ರಜೆ ಮೇಲೆ ತೆರಳಿದರು. ಈಗ ಠಾಣೆ ಮುಂದಾಳುವಿಲ್ಲದೇ ಸೊರಗುತ್ತಿದೆ. ಪ್ರಕರಣಗಳ ತನಿಖೆಗೆ ಮಾರ್ಗದರ್ಶನ ಸಿಗದೇ ತಂಡವೂ ಗೊಂದಲದಲ್ಲಿದೆ.

ಆರ್ಥಿಕ ಅಪರಾಧಗಳಿಗೆ ರಾಜ್ಯಗಳ ಗಡಿ ಇಲ್ಲ. ದೇಶದ ಯಾವುದೋ ಮೂಲೆಯಲ್ಲಿ ಕುಳಿತವನು ಬಳ್ಳಾರಿ ಜನರ ಖಾತೆಗಳಿಗೆ ಕನ್ನ ಹಾಕಬಹುದು. ಹೀಗಾಗಿ ದೂರದ ಪ್ರದೇಶಗಳಿಗೆ ತೆರಳಿ ಅಪರಾಧಿಗಳನ್ನು ಪತ್ತೆ ಮಾಡುವ, ತನಿಖೆ ನಡೆಸುವ ಹೊಣೆಗಾರಿಕೆ ಸಿಇಎನ್ ಠಾಣೆ ಮೇಲೆ ಇರುತ್ತದೆ. ಈ ಹಿಂದೆ ಬಳ್ಳಾರಿಯಲ್ಲಿ ದಾಖಲಾದ ಕೆಲವು ಪ್ರಕರಣಗಳಲ್ಲಿ ಅಧಿಕಾರಿ, ಸಿಬ್ಬಂದಿ ಬೇರೆ ರಾಜ್ಯಗಳಿಗೆ ತೆರಳಿ ಆರೋಪಿಗಳನ್ನು ಹಿಡಿದು ತಂದ ಉದಾಹರಣೆಗಳು ಇವೆ. ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, ಸೂಕ್ತ ತಂಡವೇ ಇಲ್ಲದಂತಾಗಿದೆ. ಜತೆಗೆ ಹಿಂದಿನ ಪ್ರಕರಣಗಳ ತನಿಖೆಗೆ ಸಲಹೆ, ಮಾರ್ಗದರ್ಶನ ನೀಡುವವರೇ ಇಲ್ಲ ಎಂಬಂತಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ಆನ್ಲೈನ್ ಆರ್ಥಿಕ ಅಪರಾಧಗಳು, ಡಿಜಿಟಲ್ ಅರೆಸ್ಟ್ಗಳು ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿವೆ. ಅದರ ಜತೆಗೆ, ಮಾದಕ ದ್ರವ್ಯ ಮಾರಾಟ ದಂಧೆಗಳು ವಿಸ್ತಾರಗೊಳ್ಳುತ್ತಿವೆ. ಆನ್ಲೈನ್ ವಂಚನೆಗೆ ಸಿಲುಕಿ ಜನ ವಾರ್ಷಿಕ ಸಾವಿರಾರು ಕೋಟಿ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಇತ್ತ ಮಾದಕ ದ್ರವ್ಯಗಳ ಜಾಲಕ್ಕೆ ಸಿಕ್ಕು ಯುವಕರು ವ್ಯಸನಿಗಳಾಗುತ್ತಿದ್ದಾರೆ. ಇದನ್ನು ತಡೆಯಲೆಂದೇ ಪೊಲೀಸ್ ಇಲಾಖೆ ಪ್ರತಿ ಜಿಲ್ಲೆಗಳಲ್ಲಿಯೂ ಸಿಇಎನ್ ಠಾಣೆ ಆರಂಭಿಸಿದೆ.

ಸೈಬರ್ ಆರ್ಥಿಕ ಅಪರಾಧಗಳು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಸಿಇಎನ್ ಠಾಣೆಗೂ ಎಸ್ಪಿ ಹಂತದ ಅಧಿಕಾರಿಗಳನ್ನು ನಿಯೋಜಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ಸ್ವತಃ ಗೃಹ ಸಚಿವರೇ 2024ರ ಡಿಸೆಂಬರ್ನಲ್ಲಿ ಧಾರವಾಡದಲ್ಲಿ ಈ ವಿಷಯ ತಿಳಿಸಿದ್ದರು. ಆದರೆ, ಬಳ್ಳಾರಿಯಲ್ಲಿ ಎಸ್ಪಿ ಹಂತದ ಅಧಿಕಾರಿ ಇರಲಿ, ಸದ್ಯ ಪಿಎಸ್ಐ ಕೂಡ ಇಲ್ಲ ಎಂಬಂತಾಗಿದೆ.

ತಂಡದ ಮೌಲ್ಯಮಾಪನಕ್ಕೆ ಚಿಂತನೆ: ಸದ್ಯ ಬಳ್ಳಾರಿಯಲ್ಲಿರುವ ಸಿಇಎನ್ ಠಾಣೆಯ ಕಾರ್ಯಕ್ಷಮತೆ, ಕಾರ್ಯ ಶೈಲಿ, ಕೌಶಲಗಳನ್ನು ಪರಾಮರ್ಶೆಗೆ ಒಳಪಡಿಸುವ ಚಿಂತನೆ ನಡೆಸುತ್ತಿರುವುದಾಗಿ ಬಳ್ಳಾರಿ ವಲಯ ಐಜಿಪಿ ಡಾ.ಪಿ.ಎಸ್ ಹರ್ಷ ತಿಳಿಸಿದರು.

‘ಸಿಇಎನ್ ಠಾಣೆಗಳಲ್ಲಿ ಪ್ರಮುಖವಾಗಿ ತಂಡದ ತಾಂತ್ರಿಕ ಪರಿಣತಿ, ಕೌಶಲಗಳು ಪ್ರಕರಣಗಳ ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹೀಗಾಗಿಯೇ ಈಗಿನ ತಂಡದ ಮೌಲ್ಯಮಾಪನ ಮಾಡಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿಯೇ ಹಲವು ಸಂಸ್ಥೆಗಳೊಂದಿಗೆ ಚರ್ಚಿಸಲಾಗಿದೆ’ ಎಂದು ಅವರು ಹೇಳಿದರು.

ಡಿಎಸ್ಪಿ ಹುದ್ದೆ ಖಾಲಿ ಇರುವುದು ಗಮನದಲ್ಲಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕೂಡಲೇ ಅಧಿಕಾರಿ ನಿಯೋಜನೆ ಮಾಡಿಸಿಕೊಳ್ಳುವಂತೆ ಈಗಾಗಲೇ ಎಸ್ಪಿಗೆ ತಿಳಿಸಲಾಗಿದೆ. ಪ್ರಕರಣಗಳ ದಾಖಲಾತಿ ಸೂಕ್ತ ತನಿಖೆ ನಡೆಯುತ್ತಿದೆ.
ಡಾ.ಪಿ.ಎಸ್ ಹರ್ಷ ಬಳ್ಳಾರಿ ವಲಯ ಐಜಿಪಿ

ಸೈಬರ್ ಅಪರಾಧದ ಆಳ ಅಗಲ

ಬಳ್ಳಾರಿಯ ಸಿಇಎನ್ ಠಾಣೆಗಳಲ್ಲಿ ಸೈಬರ್ ಆರ್ಥಿಕ ಮಾದಕ ದ್ರವ್ಯ ಅಪರಾಧಗಳಿಗೆ ಸಂಬಂಧಿಸಿದಂತೆ ಮೂರು ವರ್ಷಗಳಲ್ಲಿ 277 ಪ್ರಕರಣಗಳು ದಾಖಲಾಗಿದದು ಒಟ್ಟು ₹32 ಕೋಟಿಯಷ್ಟು ವಂಚನೆಯಾಗಿದೆ. 2023ರಲ್ಲಿ ಒಟ್ಟು 78 ಪ್ರಕರಣ ದಾಖಲಾಗಿದ್ದು ಒಟ್ಟು ₹31440581 ವಂಚನೆ ನಡೆದಿತ್ತು. ಈ ಪೈಕಿ 30 ಪ್ರಕರಣಗಳು ಪತ್ತೆಯಾಗಿದ್ದವು. 2024ರಲ್ಲಿ 119 ಪ್ರಕರಣಗಳಿಂದ ₹166208442 ವಂಚನೆಯಾಗಿತ್ತು. ಈ ಪೈಕಿ 14 ಪ್ರಕರಣ ಪತ್ತೆಯಾಗಿದ್ದವು. 2025ರಲ್ಲಿ 80 ಪ್ರಕರಣಗಳಲ್ಲಿ ₹130499163 ಮೋಸ ನಡೆದಿತ್ತು. 8 ಪ್ರಕರಣಗಳು ಪತ್ತೆಯಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.