ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಳೇ ಸಮಸ್ಯೆಗೆ ಪರಿಹಾರ ಕಂಡುಕೊಂಡ ರೈತ

ನಿರುಪಯುಕ್ತ ಎಂಜಿನ್‌ ಬಳಸಿ ಎಡೆಕುಂಟೆ ಸಾಧನ ಆವಿಷ್ಕಾರ
Published 3 ಜುಲೈ 2024, 14:49 IST
Last Updated 3 ಜುಲೈ 2024, 14:49 IST
ಅಕ್ಷರ ಗಾತ್ರ

ಹೂವಿನಹಡಗಲಿ: ಕೃಷಿಯಲ್ಲಿ ಯಾಂತ್ರಿಕತೆ ಹೆಚ್ಚಾದಂತೆಲ್ಲ ಎತ್ತಿನ ಬೇಸಾಯ ಕಡಿಮೆಯಾಗುತ್ತಿದೆ. ದುಬಾರಿ ಗಳೇವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಲ್ಲಿನ ರೈತರೊಬ್ಬರು ಎಡೆಕುಂಟೆ ಸಾಧನ ಆವಿಷ್ಕಾರ ಮಾಡಿದ್ದಾರೆ.

ತಾಲ್ಲೂಕಿನ ಸೋಗಿ ಗ್ರಾಮದ ಯುವ ಕೃಷಿಕ ಶಿವಸಿಂಪಿಗರ ಅಜ್ಜಯ್ಯ ಅವರು ತಮ್ಮ ದ್ವಿಚಕ್ರ ವಾಹನದ ನಿರುಪಯುಕ್ತ ಎಂಜಿನ್ ಬಳಸಿಕೊಂಡು ಎಡೆಕುಂಟೆ ಹೊಡೆಯುವ ಸಾಧನ ತಯಾರಿಸಿದ್ದಾರೆ. ತಮ್ಮ ಹೊಲದ ಮೆಕ್ಕೆಜೋಳ ಬೆಳೆಯಲ್ಲಿ ಎಡೆಕುಂಟೆ ಯಂತ್ರ ಬಳಕೆ ಮಾಡಿ ಯಶಸ್ವಿಯಾಗಿದ್ದಾರೆ.

ಬೈಕ್ ನ ನಿರುಪಯುಕ್ತ ಎಂಜಿನ್ ಮತ್ತು ಚಾಸಿಗೆ ಚಕ್ರ, ಹ್ಯಾಂಡಲ್ ಜೋಡಿಸಿದ್ದಾರೆ. ಯಂತ್ರದ ನಿಯಂತ್ರಣಕ್ಕೆ ಬೇಕಾದ ರೀತಿಯ ಕಬ್ಬಿಣದ ಕಂಬಿ ವೆಲ್ಡ್ ಮಾಡಿಸಿದ್ದಾರೆ. ಇದಕ್ಕೆ ಎರಡು ಕುಂಟೆ ಜೋಡಿಸಿ ಯಂತ್ರದ ನೆರವಿನಿಂದ ಎಡೆ ಹೊಡೆಯಲಾಗುತ್ತಿದೆ.

‘ಕೃಷಿಯಲ್ಲಿ ಟ್ರ್ಯಾಕ್ಟರ್ ಬಳಕೆ ಹೆಚ್ಚಿದಂತೆಲ್ಲ ಎತ್ತುಗಳ ಬೇಸಾಯ ಕಡಿಮೆಯಾಗಿದೆ. ಲಭ್ಯವಿದ್ದರೂ ಎತ್ತಿನ ಗಳೇವು ದುಬಾರಿಯಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗುಜರಿ ಸೇರಬೇಕಿದ್ದ ಎಂಜಿನ್ ಉಪಯೋಗಿಸಿಕೊಂಡು ಎಡೆಕುಂಟೆ ಸಾಧನೆ ಮಾಡಿಕೊಂಡಿರುವೆ. ಮೂರು ಎಕರೆ ಮೆಕ್ಕೆಜೋಳವನ್ನು ಈ ಸಾಧನದಿಂದಲೇ ಎಡೆ ಹೊಡೆದಿದ್ದೇವೆ. ಒಂದು ಲೀಟರ್ ಪೆಟ್ರೋಲ್ ನಲ್ಲಿ ಒಂದು ಎಕರೆ ಎಡೆಕುಂಟೆ ಹೊಡೆಯಬಹುದು’ ಎಂದು ಅಜ್ಜಯ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT