ಕಂಪ್ಲಿ: ಇಲ್ಲಿಯ ಸವಿತಾ ಸಮಾಜದವರು ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ತಹಶೀಲ್ದಾರ್ ಶಿವರಾಜ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
‘ಸವಿತಾ ಸಮುದಾಯದ ಜಾತಿ ಪದವನ್ನು ಸಾರ್ವಜನಿಕವಾಗಿ ಬೈಗುಳವಾಗಿ ಉಪಯೋಗಿಸುವವರ ವಿರುದ್ಧ ದೌರ್ಜನ್ಯ ಕಾಯ್ದೆಯ ಅಡಿ ದೂರು ದಾಖಲಿಸಬೇಕು. ಜನಸಂಖ್ಯೆ ಆಧಾರಿತವಾಗಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮೀಸಲಾತಿಗೆ ಆದೇಶ ಹೊರಡಿಸಬೇಕು. ನಾಯಿಂದ ಜಾತಿಯನ್ನು ಹಿಂದುಳಿದ ಪ್ರವರ್ಗ-2ಎ ಮೀಸಲಿನ ಸವಿತಾ ಸಮದಾಯಕ್ಕೆ ಸೇರ್ಪಡೆಗೊಳಿಸಬೇಕು’ ಎಂದು ಸವಿತಾ ಸಮಾಜ ಸಂಘದ ಜಿಲ್ಲಾ ಉಪಾಧ್ಯಕ್ಷ ಪಿ. ಪಾಂಡುರಂಗ ಮನವಿ ಮಾಡಿದರು.
ರಾಜ್ಯದ ನಾಲ್ಕು ಕಡೆ ಕ್ಷೌರಿಕ ತರಬೇತಿ ಕೇಂದ್ರಗಳನ್ನು, ನಾದಸ್ವರ ಡೋಲು ನುಡಿಸುವ ತರಬೇತಿ ಕೇಂದ್ರಗಳನ್ನು ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಸವಿತಾ ಸಮಾಜ ಸಂಘದ ತಾಲ್ಲೂಕು ಅಧ್ಯಕ್ಷ ಎ. ಹನುಮಂತ, ಪದಾಧಿಕಾರಿಗಳಾದ ಎ. ಅಂಜಿನಪ್ಪ, ಎನ್. ಶ್ರೀನಿವಾಸ್, ಆನಂದ್, ಕೆ. ಶ್ರೀನಿವಾಸ್, ರಾಜಾ, ವೀರಕುಮಾರ್, ಬುಜ್ಜಿ, ಕೃಷ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.