ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೂಡ್ಲಿಗಿ; ಪ.ಪಂ ಅಧ್ಯಕ್ಷ, ಉಪಾಧ್ಯಕ್ಷೆ ಅಧಿಕಾರ ಸ್ವೀಕಾರ

Published 22 ಆಗಸ್ಟ್ 2024, 14:19 IST
Last Updated 22 ಆಗಸ್ಟ್ 2024, 14:19 IST
ಅಕ್ಷರ ಗಾತ್ರ

ಕೂಡ್ಲಿಗಿ: ಸ್ಥಳೀಯ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಕಾವಲ್ಲಿ ಶಿವಪ್ಪ ನಾಯಕ ಮತ್ತು ಲೀಲಾವತಿ ಪ್ರಭಾಕರ್ ಅವರು ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಗುರುವಾರ ಅಧಿಕಾರ ಸ್ವೀಕರಿಸಿದರು.

ನಂತರ ಮಾತನಾಡಿದ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ, 'ಪ್ರತಿ ವಾರ್ಡಿನ ಸಮಸ್ಯೆಗಳನ್ನು ಪಟ್ಟಿ ಮಾಡಿ, ಅಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಸಭೆ ನಡೆಸಲಾಗುವುದು. ಪಟ್ಟಣ ಪಂಚಾಯ್ತಿಯ ಉಪಾಧ್ಯಕ್ಷರು, ಎಲ್ಲಾ ಸದಸ್ಯರು ಹಾಗೂ ಮುಖ್ಯಾಧಿಕಾರಿ, ಸಮನ್ವಯದಿಂದ ಹಕ್ಕು ಪತ್ರ ಪಡೆಯುವುದು ಸೇರಿದಂತೆ ಯಾವುದೇ ಕೆಲಸಗಳಿಗೆ ಜನರು ಅಲೆದಾಡುವುದನ್ನು ತಪ್ಪಿಸಿ, ಜನರಿಗೆ ಅನುಕೂಲ ಮಾಡಿಕೊಡಲಾಗುವುದು. ಶಾಸಕರು ಈಗಾಗಲೇ ಅಂಬೇಡ್ಕರ್ ನಗರದ ಅಭಿವೃದ್ಧಿಗೆ ₹3 ಕೋಟಿ ಯೋಜನೆ ರೂಪಿಸಿದ್ದು, ₹75 ಲಕ್ಷ ಬಿಡುಗಡೆಯಾಗಿದೆ. ಲೋಕಸಭಾ ಸದಸ್ಯ ಈ. ತುಕಾರಾಂ ಅವರು ಸಂಡೂರು ರಸ್ತೆಯನ್ನು ಅಗಲೀಕರಣ ಮಾಡಲು ಕ್ರಿಯಾ ಯೋಜನೆ ರೂಪಿಸಿ ಕಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶಾಸಕರ, ಸಂಸದರ ಅನುದಾನದಲ್ಲಿ ಪಟ್ಟಣದಲ್ಲಿ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ಲೀಲಾವತಿ ಪ್ರಭಾಕರ, ಸದಸ್ಯ ಸಯ್ಯದ್ ಶುಕೂರ್, ಸದಸ್ಯರಾದ ಬಾಸೂ ನಾಯ್ಕ, ಕೆ.ಈಶಪ್ಪ, ಮುಖ್ಯಾಧಿಕಾರಿ ಎಂ.ಕೆ.ಮುಗುಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ, ಮುಖಂಡರಾದ ಎಸ್.ಸುರೇಶ, ಡಿ.ಎಚ್.ದುರುಗೇಶ, ನಲ್ಲಮುತ್ತಿ ದುರುಗೇಶ, ಕೊತ್ಲೇಶ, ಉದಯ ಜನ್ನು, ಢಾಣಿ ರಾಘವೇಂದ್ರ, ಸಣ್ಣ ಕೊತ್ಲಪ್ಪ, ಸಿ.ಬಿ.ಜಯರಾಂ ನಾಯಕ, ವೆಂಕಟೇಶ, ಬೇಕರಿ ಮಹೇಶ, ಸಿ.ಬಿ.ಸಿದ್ದೇಶ, ಕುಮಾರಸ್ವಾಮಿ, ಎನ್.ಗಂಗಾಧರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT