ಬಳ್ಳಾರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದ ಕಾರ್ಯಕ್ರಮಗಳಿಗೆ ಲಂಚ ಕೊಡುವಂತೆ ಕೇಳಿದ ಆರೋಪದ ಮೇಲೆ ಇಲಾಖೆಯ ಬಳ್ಳಾರಿ ಜಿಲ್ಲೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣವರ ಅವರನ್ನು ಶುಕ್ರವಾರ ಅಮಾನತು ಮಾಡಲಾಗಿದೆ.

ಪ್ರಾಯೋಜಕತ್ವದ ಯೋಜನೆಯಡಿ ಎರಡೆರಡು ಕಾರ್ಯಕ್ರಮಗಳನ್ನು ಪಡೆದ ಕಲಾವಿದರಿಂದ ಸಿದ್ದಲಿಂಗೇಶ್ ರಂಗಣ್ಣವರ ₹ 10 ಸಾವಿರ ಲಂಚಕ್ಕೆ ಬೇಡಿಕೆ ಇಡುತ್ತಾರೆ. ಇಲಾಖೆಯ ಜಂಟಿ ನಿರ್ದೇಶಕರಿಗೆ ಹಣ ತಲುಪಿಸಬೇಕು. ಹೀಗಾಗಿ, ಎರಡೆರಡು ಕಾರ್ಯಕ್ರಮ ಪಡೆದವರಿಂದ ಹಣ ಕೊಡಿಸುವಂತೆ ಕಲಾವಿದರೊಬ್ಬರನ್ನು ಮೊಬೈಲ್‌ನಲ್ಲಿ ಕೇಳಿದ್ದಾರೆ ಎನ್ನಲಾದ ಸಂಭಾಷಣೆ ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಇಲಾಖೆಯ ಮಹಿಳಾ ಉದ್ಯೋಗಿಯೊಬ್ಬರು, ಕಡೇ ಪಕ್ಷ ₹ 8 ಸಾವಿರವನ್ನಾದರೂ ತಲುಪಿಸುವಂತೆ ಈ ಕಲಾವಿದನಿಗೆ ದುಂಬಾಲು ಬೀಳುತ್ತಾರೆ. ಅವರ ಸಂಭಾಷಣೆಯೂ ಇದೇ ಆಡಿಯೋದಲ್ಲಿದೆ ಎಂದು ಹೇಳಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಪ್ರಕಾಶ ಜಿ.ಟಿ. ನಿಟ್ಟಾಲಿ ಈ ಅಮಾನತು ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.