ಬಳ್ಳಾರಿ: ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಎಸ್ಐಟಿ ಅಧಿಕಾರಿಗಳು ಶುಕ್ರವಾರ ರೊದ್ದಂ ಜ್ಯುವೆಲರ್ಸ್ ಮತ್ತು ಮಾಲೀಕ ಗೋವರ್ಧನ್ ನಿವಾಸದಲ್ಲಿ ಮತ್ತೆ ಶೋಧ ನಡೆಸಿದ್ದಾರೆ.

ಐವರು ಅಧಿಕಾರಿಗಳ ತಂಡ ಬಳ್ಳಾರಿಯ ಬೆಂಗಳೂರು ರಸ್ತೆಯಲ್ಲಿರುವ ರೊದ್ದಂ ಜ್ಯೂಯಲ್ಸ್, ಕೋಟೆ ಪ್ರದೇಶದಲ್ಲಿರುವ ಅವರ ನಿವಾಸದ ಪರಿಶೀಲನೆ ನಡೆಸಿದರು. ಕುಟುಂಬಸ್ಥರ ಬ್ಯಾಂಕ್ ವಿವರ, ಪಾಸ್ಬುಕ್ಗಳನ್ನು ಅಧಿಕಾರಿಗಳು ಪಡೆದರು ಎನ್ನಲಾಗಿದೆ.

ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇರಳದ ವಿಶೇಷ ತನಿಖಾ ತಂಡ (ಎಸ್ಐಟಿ) 2025ರ ಡಿಸೆಂಬರ್ 19ರಂದು ಗೋವರ್ಧನ ಅವರನ್ನು ಬಂಧಿಸಿತ್ತು. ಗೋವರ್ಧನ ಅವರು 2019ರಲ್ಲಿ ಕೇರಳದ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಚಿನ್ನದ ಬಾಗಿಲು ಮಾಡಿಸಿಕೊಟ್ಟಿದ್ದರು. ಬಾಗಿಲು ಪಕ್ಕದ ಕಂಬಗಳನ್ನೂ ಅವರೇ ಮಾಡಿಸಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.