ಕೂಡ್ಲಿಗಿ: ಮೂರು ವರ್ಷಗಳಿಂದ ತಾಲ್ಲೂಕಿನ ಗುಡೇಕೋಟೆಯಲ್ಲಿ ವೀರ ವನಿತೆ ಒನಕೆ ಓಬವ್ವ ಅವರ ಹೆಸರಿನಲ್ಲಿ ಉತ್ಸವ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಈ ಗ್ರಾಮ ಒನಕೆ ಓಬವ್ವ ತವರೂರು ಎನ್ನುವುದಕ್ಕೆ ಇಲ್ಲಿ ಯಾವುದೇ ಕುರುಹು ಇಲ್ಲ.

ಚಿತ್ರದುರ್ಗದ ಪಾಳೆಗಾರರ ಸಂಸ್ಥಾನವನ್ನು ಹೈದರಲಿಯಿಂದ ರಕ್ಷಣೆ ಮಾಡಿದ್ದ ಓಬವ್ವಳ ಕೀರ್ತಿ ಎಲ್ಲಡೆಯೂ ಹರಡಿದೆ. ಆದರೆ ಅವರ ತವರೂರಾದ ಗುಡೇಕೋಟೆಯಲ್ಲಿ ಹೆಸರು ಹೇಳುವ ಒಂದೇ ಒಂದು ಕುರುಹು ಇಲ್ಲದಿರುವುದು ಅನೇಕರಲ್ಲಿ ಬೇಸರ ಮೂಡಿಸಿದೆ. ಕೊಟ್ಯಂತರ ರೂಪಾಯಿ ವೆಚ್ಚ ಮಾಡಿ ಉತ್ಸವ ಮಾಡುತ್ತಾರೆ. ಇದರಿಂದ ಓಬವ್ವಳ ಇತಿಹಾಸ ರಾಜ್ಯದಾಚೆ ಹೋಗುತ್ತದೆ. ಆದರೆ ಈ ಗ್ರಾಮಕ್ಕೆ ಭೇಟಿ ನೀಡುವ ಪ್ರವಾಸಿಗರು ಇದು ಓಬವ್ವಳ ತವರೂರು ಎಂದು ಗುರುತಿಸುವುದು ಹೇಗೆ? ಎನ್ನುವುದು ಹಲವರ ಪ್ರಶ್ನೆಯಾಗಿದೆ.

ಚಿತ್ರದುರ್ಗದ ಕೋಟೆಗೆ ಮುತ್ತಿಗೆ ಹಾಕಿ ಕೋಟೆಯೊಳಗೆ ನುಗ್ಗಲು ಯತ್ನಿಸಿದ ಹೈದರಲಿ ಸೈನಿಕರಿಂದ ಕೋಟೆಯನ್ನು ರಕ್ಷಣೆ ಮಾಡಲು ಒನಕೆಯನ್ನು ಹಿಡಿದು ವೈರಿಗಳನ್ನು ಬಗ್ಗು ಬಡಿದ ವೀರ ಮಹಿಳೆ ಒನಕೆ ಓಬವ್ವಳ ಹೆಸರು ಇತಿಹಾಸದಲ್ಲಿ ಮರೆಯಲಾಗದ್ದು. ಇವರನ್ನು ಕರ್ನಾಟಕದ ವೀರವನಿತೆಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಹೈದರಲಿಯ ಸೈನಿಕರನ್ನು ಸೋಲಿಸಿದ ಕಿಂಡಿಯನ್ನು ಒನಕೆ ಓಬವ್ವಳ ಕಿಂಡಿ ಅಥವಾ ಒನಕೆ ಕಿಂಡಿ ಎಂದು ಕರೆಯಲಾಗುತ್ತದೆ.

‘ಓಬವ್ವಳ ತವರೂರು ಗುಡೇಕೋಟೆ ಎನ್ನುವುದು ಗ್ರಾಮಕ್ಕೆ ಭೇಟಿ ನೀಡುವವರಿಗೆ ತಕ್ಷಣ ಗೊತ್ತಾಗಬೇಕು. ಇದಕ್ಕಾಗಿ ಗ್ರಾಮದ ಪ್ರಮುಖ ಜಾಗದಲ್ಲಿ ಆಕರ್ಷಣೀಯಾಗಿ ವೃತ್ತ ನಿರ್ಮಾಣ ಮಾಡಿ ಅಲ್ಲಿ ಓಬವ್ವಳ ಪುತ್ಥಳಿ ಸ್ಥಾಪನೆ ಮಾಡಬೇಕು ಎಂಬುದು ಬಹು ದಿನಗಳ ಬೇಡಿಕೆಯಾಗಿದೆ. ಇದರೊಂದಿಗೆ ಕೂಡ್ಲಿಗಿ ಪಟ್ಟಣದಲ್ಲಿಯೂ ಓಬವ್ವಳ ಪುತ್ಥಳಿ ನಿರ್ಮಾಣ ಮಾಡುವ ಮೂಲಕ ಓಬವ್ವಳ ತವರೂರು ಕೂಡ್ಲಿಗಿ ತಾಲ್ಲೂಕು ಎಂದು ಜನಮಾನಸದಲ್ಲಿ ಮೂಡುವಂತೆ ಮಾಡಬೇಕು’ ಎಂಬುದು ಅನೇಕರ ಒತ್ತಾಸೆಯಾಗಿದೆ. ಈ ಬಾರಿಯ ಒನಕೆ ಓಬವ್ವ ಉತ್ಸವದ ನಂತರ ಅದು ಕಾರ್ಯರೂಪಕ್ಕೆ ಬರಲಿ ಎಂಬುದು ಜನರ ಅಗ್ರಹವಾಗಿದೆ.

ಗುಡೇಕೋಟೆಯಲ್ಲಿನ ಐತಿಹಾಸಿಕ ಸ್ಮಾರಕಗಳು ಹಾಳಾಗಿದ್ದು, ನಿಧಿಗಳ್ಳರ ದಾಳಿಯಿಂದ ನಾಶವಾಗುತ್ತಿವೆ. ಪುರಾತತ್ವ ಇಲಾಖೆಯು ಗುಡೆಕೋಟೆ ಗ್ರಾಮವನ್ನು ವ್ಯಾಪ್ತಿಗೆ ತೆಗೆದುಕೊಂಡು ಇತಿಹಾಸ ಪ್ರಸಿದ್ಧ ತಾಣಕ್ಕೆ ರಕ್ಷಣೆ ಕೊಡಬೇಕಿದೆ.

‘ವೃತ್ತ ಪುತ್ಥಳಿ ನಿರ್ಮಾಣವಾಗಲಿ’

ಕೂಡ್ಲಿಗಿ ಪಟ್ಟಣದಲ್ಲಿ ವೃತ್ತ ಹಾಗೂ ಪುತ್ಥಳಿ ನಿರ್ಮಾಣ ಮಾಡುವಂತೆ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ. ಇದರ ಜೊತೆಗೆ ಗುಡೇಕೋಟೆಯಲ್ಲಿಯೂ ವೃತ್ತ ಹಾಗೂ ಪುತ್ಥಳಿ ನಿರ್ಮಾಣ ಮಾಡಬೇಕು. ಬಗ್ಗೆ ಶಾಸಕರು ಹಾಗೂ ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ಕರ್ನಾಟಕ ರಾಜ್ಯ ವೀರ ವನಿತೆ ಒನಕೆ ಓಬವ್ವ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹಿರೇಕುಂಬಳಗುಂಟೆ ಉಮೇಶ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.