ಸಿರುಗುಪ್ಪ: ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ತಾಲ್ಲೂಕಿನ ಎಂಟಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಹುಳು ತಿಂದ ಗೋಧಿ ಮತ್ತು ಇತರ ಆಹಾರ ಧಾನ್ಯ ಪೂರೈಸಲಾಗಿದೆ.

ಕಳಪೆ ದರ್ಜೆಯ ಗೋಧಿಯನ್ನು ಬಳಸಿದರೆ ಮಕ್ಕಳ ಆರೋಗ್ಯ ಹದಗೆಡಬಹುದು ಎಂದು ಶಿಕ್ಷಕರು ಅದನ್ನು ಬಳಸಿರಲಿಲ್ಲ. ವಾಪಸು ತೆಗೆದುಕೊಂಡು ಹೋಗಲು ತಿಳಿಸಿದರೂ ಪೂರೈಕೆದಾರರು ಕ್ರಮ ವಹಿಸಿಲ್ಲ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

ಶನಿವಾರ ಶಾಲೆಗಳಲ್ಲಿ ಉಪ್ಪಿಟ್ಟು, ಪಾಯಸ ಮಾಡಲಾಗುತ್ತದೆ. ಇದಕ್ಕಾಗಿ ಡಿಸೆಂಬರ್ ತಿಂಗಳಲ್ಲಿ ಪೂರೈಸಿದ್ದ ಗೋಧಿ ಹುಳು ಹಿಡಿದಿದ್ದು, ವಾಸನೆ ಬರುತ್ತಿದೆ. ಕಳಪೆ ಗೋಧಿ ಪೂರೈಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ಸದ್ಯ ಶಾಲೆಗಳಿಗೆ ಪೂರೈಕೆಯಾಗಿರುವ ಹುಳು ಬಿದ್ದಿರುವ ಹಾಗೂ ಮುಗ್ಗಲು ಗೋಧಿಯನ್ನು ಬಳಸದಂತೆ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗುವುದು ಎಂದು ಸಿರುಗುಪ್ಪ ಬಿಇಒ ಎಚ್.ಗುರಪ್ಪ ಅವರು ತಿಳಿಸಿದ್ದಾರೆ.

ಗುತ್ತಿಗೆದಾರರು ಕೆಲ ಶಾಲೆಗಳಿಗೆ ಕಳಪೆ ಗುಣ್ಣಮಟ್ಟದ ಗೋಧಿ ಪೂರೈಸಿರುವುದು ಗಮನಕ್ಕೆ ಬಂದಿದೆ. ಅದನ್ನು ವಾಪಸು ಪಡೆಯಲಾಗುವುದು
ಜಾಫರ್ ಷರೀಪ್ ಸಹಾಯಕ ನಿರ್ದೇಶಕ ತಾಲ್ಲೂಕು ಅಕ್ಷರ ದಾಸೋಹ ಇಲಾಖೆ ಸಿರುಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.