ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಂಪ್ಲಿ | ಮಿತಿಮೀರಿ ಹಸಿರು ಆಹಾರ ಸೇವನೆ: ಎಂಟು ಕುರಿ ಸಾವು

Published 18 ಜೂನ್ 2024, 15:23 IST
Last Updated 18 ಜೂನ್ 2024, 15:23 IST
ಅಕ್ಷರ ಗಾತ್ರ

ಕಂಪ್ಲಿ: ತಾಲ್ಲೂಕಿನ ಚಿಕ್ಕಜಾಯಿಗನೂರು ಸಮೀಪದ ಸಂಚಯ್ಯಕ್ಯಾಂಪ್ ಬಳಿಯ ಗದ್ದೆಯಲ್ಲಿ ಹಸಿರು ಆಹಾರವಾದ ಪಿಳ್ಳೆ ಪೆಸರು ಸೇವಿಸಿ ಅಸ್ವಸ್ಥಗೊಂಡಿದ್ದ 40 ಕುರಿಗಳಲ್ಲಿ 8 ಕುರಿಗಳು ಮಂಗಳವಾರ ಮೃತಪಟ್ಟಿವೆ.

ಬೆಳಗಾವಿ ಮೂಲದ ಸಂಚಾರಿ ಕುರಿಗಾರರಾದ ಚಿಂಗಳಿ ಮಾಳಪ್ಪನ 4 ಕುರಿ, ಚಿಂಗಳಿ ಶಿವಪ್ಪನ 3 ಕುರಿ ಮತ್ತು ವೀರೇಶನ 1ಕುರಿ ಸತ್ತಿವೆ.

ವೆಂಕಟರಾಮಪ್ಪ ಗದ್ದೆಯಲ್ಲಿ ಬೀಡು ಬಿಟ್ಟಿದ್ದ ಕುರಿಗಳು ಹಸಿರು ಆಹಾರವಾದ ಪಿಳ್ಳೆ ಪೆಸರು ಅನ್ನು 40 ಕುರಿಗಳು ಮಿತಿಮೀರಿ ಸೇವಿಸಿದ್ದರಿಂದ 40 ಕುರಿಗಳ ಹೊಟ್ಟೆ ಉಬ್ಬಿ ಅಸ್ವಸ್ಥಗೊಂಡಿದ್ದವು. ತಕ್ಷಣ ಔಷಧೋಪಚಾರ ಮಾಡಿದ್ದರಿಂದ 32 ಕುರಿಗಳ ಆರೋಗ್ಯದಲ್ಲಿ ಸುಧಾರಣೆ ಕಂಡುಬಂತು.

ಆದರೆ, 8ಕುರಿಗಳು ಮೃತಪಟ್ಟವು. ಪ್ರತಿ ಕುರಿ ಮೌಲ್ಯ ₹ 15 ಸಾವಿರ ಎಂದು ಕುರಿಗಾರರು ಅಸಮಾಧಾನದಿಂದ ತಿಳಿಸಿದರು. ಸತ್ತ ಕುರಿಗಳಿಗೆ ಪರಿಹಾರ ನೀಡುವಂತೆಯೂ ಮನವಿ ಮಾಡಿದರು.

ಮೆಟ್ರಿ ಗ್ರಾಮದ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಡಾ.ಪ್ರದೀಪ್‍ಕುಮಾರ್, ಪಶು ವೈದ್ಯ ಪರೀಕ್ಷಕ ಕೆ.ಮಂಜುನಾಥ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಸತ್ತ ಕುರಿಗಳನ್ನು ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT