ಕಂಪ್ಲಿ: ‘ಪ್ರಾಥಮಿಕ ಪರಿಶೀಲನೆ ಬಳಿಕ ತಾಲ್ಲೂಕಿನ ವಿವಿಧೆಡೆ ಸುಮಾರು 60 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ದಾಸ್ತಾನು ಇರುವುದು ಕಂಡುಬಂದಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಎ.ಮಂಜುನಾಥ ರೆಡ್ಡಿ ತಿಳಿಸಿದರು.

ತಾಲ್ಲೂಕು ಸೇರಿದಂತೆ ಪಟ್ಟಣದ ವಿವಿಧ ಸಹಕಾರಿ ಸಂಘ ಮತ್ತು ಖಾಸಗಿ ರಸಗೊಬ್ಬರ ಅಂಗಡಿಗಳಿಗೆ ಶನಿವಾರ ದಿಢೀರ್ ಭೇಟಿ ನೀಡಿ ಗೊಬ್ಬರ ದಾಸ್ತಾನು ಪರಿಶೀಲಿಸಿದ ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಯೂರಿಯಾ ಜೊತೆಗೆ ಕ್ರಿಮಿನಾಶಕ, ಇತರೆ ಉತ್ಪನ್ನಗಳನ್ನು ತಳಕು ಹಾಕದಂತೆ, ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದೇನೆ’ ಎಂದರು.

‘ಯೂರಿಯಾ ಗೊಬ್ಬರ ನಿಗದಿತ ದರಕ್ಕೆ ಮಾರಾಟ ಮಾಡಿದ ಬಳಿಕ ರೈತರಿಗೆ ಬಿಲ್ ಕಡ್ಡಾಯವಾಗಿ ನೀಡುವಂತೆಯೂ ಸೂಚಿಸಿದ್ದೇನೆ’ ಎಂದು ತಿಳಿಸಿದರು.

‘ತಾಲ್ಲೂಕಿನ ಮಧ್ಯಮ, ಸಣ್ಣ, ಅತೀ ಸಣ್ಣ ರೈತರು ಯೂರಿಯಾ ಗೊಬ್ಬರ ಸಕಾಲಕ್ಕೆ ದೊರೆಯದೆ ತೊಂದರೆಯಲ್ಲಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇವರಿಗೆ ಪ್ರಥಮ ಆದ್ಯತೆಯೊಂದಿಗೆ ಗೊಬ್ಬರ ಪೂರೈಸುವಂತೆ ವ್ಯಾಪಾರಿಗಳಿಗೆ ತಿಳಿಸಲಾಗಿದೆ’ ಎಂದು ಹೇಳಿದರು.

‘ತಾಲ್ಲೂಕಿನ ಬೇಡಿಕೆಗೆ ತಕ್ಕಂತೆ ಯೂರಿಯಾ ಪೂರೈಕೆಯಾಗುವವರೆಗೆ ಸದ್ಯ ಇರುವ ಯೂರಿಯಾ ದಾಸ್ತಾನನ್ನು ಸಮತೋಲನ ಮಾಡಲು ಸಲಹೆ ನೀಡಿದ್ದೇನೆ’ ಎಂದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ‘ಒಂದು ವಾರದಲ್ಲಿ ಜಿಲ್ಲೆಯಾದ್ಯಂತ ಯೂರಿಯಾ ಗೊಬ್ಬರ ಪೂರೈಕೆಯಾಗದಿದ್ದಲ್ಲಿ ಹೋರಾಟ ಅನಿವಾರ್ಯ’ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

‘ಜಿಲ್ಲೆಗೆ ಯೂರಿಯಾ ಸರಬರಾಜು ಆಗುತ್ತಿದ್ದಂತೆ ಸಹಕಾರಿ ಸಂಘಗಳಿಗೆ ಪ್ರಥಮ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘ ತಾಲ್ಲೂಕು ಕಾರ್ಯಾಧ್ಯಕ್ಷರಾದ ಕೊಟ್ಟೂರು ರಮೇಶ್, ಡಿ. ಮುರಾರಿ, ಪದಾಧಿಕಾರಿಗಳು, ಕೃಷಿ ಅಧಿಕಾರಿ ಕೆ. ಸೋಮಶೇಖರ್ ಹಾಜರಿದ್ದರು.

‘ಪ್ರಜಾವಾಣಿ’ಯು ಜುಲೈ 12ರ ಸಂಚಿಕೆಯಲ್ಲಿ ‘ಕಂಪ್ಲಿಯಲ್ಲಿ ಯೂರಿಯಾ ಕೊರತೆ’ ಕುರಿತು ವರದಿ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.