ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ಷ್ಮ ಕ್ಷೇತ್ರಗಳ ಮೇಲೆ ವಿಶೇಷ ನಿಗಾ

ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ ರಾವತ್ ಸೂಚನೆ
Last Updated 5 ಮೇ 2018, 9:32 IST
ಅಕ್ಷರ ಗಾತ್ರ

ಬಳ್ಳಾರಿ: ‘ಅತ್ಯಧಿಕ ವೆಚ್ಚವಾಗಬಹುದು ಎಂದು ಗುರುತಿಸಲಾಗಿರುವ ಜಿಲ್ಲೆಯ ಕ್ಷೇತ್ರಗಳ ಮೇಲೆ ವಿಶೇಷ ನಿಗಾ ಇಡಬೇಕು’ ಎಂದು ಕೇಂದ್ರದ ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ ರಾವತ್ ಸೂಚನೆ ನೀಡಿದರು.

ಜಿಲ್ಲೆಯ ಪೊಲೀಸ್ ವೀಕ್ಷಕರು, ವೆಚ್ಚ ವೀಕ್ಷಕರು ಮತ್ತು ಸಾಮಾನ್ಯ ವೀಕ್ಷಕರೊಂದಿಗೆ ಶುಕ್ರವಾರ ವಿಡಿಯೊ ಸಂವಾದ ಸಭೆ ನಡೆಸಿದ ಅವರು, ‘ಬಳ್ಳಾರಿ ನಗರ, ಗ್ರಾಮೀಣ ಮತ್ತು ವಿಜಯನಗರ ಕ್ಷೇತ್ರವನ್ನು ವೆಚ್ಚ ಸೂಕ್ಷ್ಮ ಕ್ಷೇತ್ರಗಳೆಂದು ಗುರುತಿಸಲಾಗಿದೆ. ಅಲ್ಲಿ ಕಣ್ಗಾವಲು ಇಡಬೇಕು. ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸ್ಪಷ್ಟಪಡಿಸಿದರು.

‘ಸೂಕ್ಷ್ಮ ಕ್ಷೇತ್ರಗಳಿಗೆ ನಿಯೋಜಿಸಿರುವ ಸಿಬ್ಬಂದಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಕರ್ತವ್ಯ ನಿರ್ಲಕ್ಷ್ಯ ತೋರಿದರೆ ಜನಪ್ರತಿನಿಧಿ ಕಾಯ್ದೆ ಅಡಿ ಶಿಸ್ತು ಕ್ರಮ ಕೈಗೊಳ್ಳಿ’ ಎಂದು ಸೂಚಿಸಿದರು.

‘ಶಾಂತಿ ಮತ್ತು ಸುವ್ಯವಸ್ಥಿತವಾಗಿ ಚುನಾವಣೆ ನಡೆಸಲು ತೊಂದರೆಗಳಿವೆಯೇ? ಇದ್ದರೆ ಅದಕ್ಕೆ ಕೈಗೊಂಡ ಕ್ರಮಗಳೇನು’ ಎಂದು ಪೊಲೀಸ್ ವೀಕ್ಷಕರನ್ನು ಪ್ರಶ್ನಿಸಿದರು.

ಅವರಿಂದ ಮಾಹಿತಿ ಪಡೆದ ಬಳಿಕ, ‘ಜಿಲ್ಲೆಯಲ್ಲಿ ಯಾವುದೇ ತೊಂದರೆಯಾಗದಂತೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಎಲ್ಲ ವೀಕ್ಷಕರು ಎಚ್ಚರಿಕೆ ವಹಿಸಬೇಕು’ ಎಂದರು.

ಮೂರು ಗಂಟೆ ಅವಧಿ: ಸುದೀರ್ಘ ಮೂರು ಗಂಟೆ ಅವಧಿಯಲ್ಲಿ ಆಯುಕ್ತರು, ವೀಕ್ಷಕರು ಮಂಡಿಸಿದ ವರದಿಗಳಲ್ಲಿದ್ದ ಸೂಕ್ಷ್ಮ ಅಂಶಗಳ ಕುರಿತು ಹೆಚ್ಚಿನ ಮಾಹಿತಿಗಳನ್ನು ಪಡೆದರು.

ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾದ್‌ ಮನೋಹರ್, ಪೊಲೀಸ್ ವೀಕ್ಷಕ ಎಲ್.ವಿ.ಅಂತೋನಿ ದೇವಕುಮಾರ, ಸಾಮಾನ್ಯ ವೀಕ್ಷಕರಾದ ಜೀತೇಂದ್ರಕುಮಾರ, ಡಾ.ಅಶೋಕಚಂದ್ರ, ಎಲ್.ಎಸ್.ಖೇನ್, ಬಿಜಯಕುಮಾರ ನಾಯಕ್, ಎಸ್.ಸೋಹೆಲ್ ಅಲಿ ಮತ್ತು ವೆಚ್ಚ ವೀಕ್ಷಕರಾದ ಅಂದೆ ಪೊಶೆಟ್ಟಿ, ಎನ್.ಸಂಜಯ್‌ಗಾಂಧಿ, ಡಾ.ರಾಜು ಶಕ್ತಿವೇಲ್, ನೇಮ್‌ ಸಿಂಗ್, ಚಮನ್‌ಲಾಲ್ ಡೋಗ್ರಾ, ನವನೀತ್ ಅಗರವಾಲ್ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT