‘ಸಂಘದಿಂದ ಸಮಾಜಮುಖಿ ಕಾರ್ಯ’

ಮಂಗಳವಾರ, ಜೂಲೈ 16, 2019
26 °C

‘ಸಂಘದಿಂದ ಸಮಾಜಮುಖಿ ಕಾರ್ಯ’

Published:
Updated:
Prajavani

ನೆಲಮಂಗಲ: ಸುಭಾಷ್‌ನಗರ ಕಾಯಂ ನಿವಾಸಿಗಳ ಸಂಘದ ವತಿಯಿಂದ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ದೇಣಿಗೆ, ಬಡ ವಿದ್ಯಾರ್ಥಿಗಳಿಗೆ ನೆರವು... ಹೀಗೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಧ್ಯಕ್ಷ ಡಾ.ರಾಘವೇಂದ್ರ ಜೋಶಿ ತಿಳಿಸಿದರು.

ಪಟ್ಟಣದ ಸುಭಾಷ್‌ನಗರ ಕಾಯಂ ನಿವಾಸಿಗಳ ಸಂಘ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯೆ ಪೂರ್ಣಿಮಾ ಸುಗ್ಗರಾಜು ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಪೂರ್ಣಿಮಾ ಸುಗ್ಗರಾಜು ಮಾತ ನಾಡಿ, ‘ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಹಾಗೂ ದಾನಿಗಳು, ಇನ್ನಿತರ ಮೂಲ ಗಳಿಂದ ಹಣ ತಂದು ವಾರ್ಡ್‌ನ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು.

ಬಿಜೆಪಿ ಮಾಗಡಿ ತಾಲ್ಲೂಕು ಘಟಕದ ಅಧ್ಯಕ್ಷ ರಂಗಧಾಮಯ್ಯ, ಸಂಘದ ಪ್ರಧಾನ ಕಾರ್ಯದರ್ಶಿ ನಟರಾಜು, ಖಜಾಂಚಿ ಎನ್‌.ಎಸ್‌. ಸುಂದರೇಶ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !