ಯಲಹಂಕ: ಬ್ಯಾಟರಾಯನಪುರ ಕ್ಷೇತ್ರದ ದೊಡ್ಡಜಾಲ ಗ್ರಾಮ ಪಂಚಾಯಿತಿಯ ಪ್ರಭಾರ ಅಧ್ಯಕ್ಷರಾಗಿ ಎ.ಸಿ.ಗೌರಮ್ಮ ಕೃಷ್ಣಪ್ಪ ಆಯ್ಕೆಯಾಗಿದ್ದಾರೆ.

ಆರ್.ಬೈರೇಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕಾಗಿ ಉಪಾಧ್ಯಕ್ಷರಾಗಿದ್ದ ಗೌರಮ್ಮ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಒಟ್ಟು 14 ಸದಸ್ಯರನ್ನು ಪಂಚಾಯಿತಿ ಹೊಂದಿದೆ.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎನ್.ಕೆ.ಮಹೇಶ್ಕುಮಾರ್, ಹಂಸವೇಣಿ ಮಂಜುನಾಥ್, ಸದಸ್ಯರಾದ ಎಂ.ಚೇತನ್, ನಾಗರಾಜು.ಎ, ಹರಿಪ್ರಕಾಶ್, ಪ್ರಕಾಶ್, ನರಸಿಂಹಯ್ಯ, ಸೌಭಾಗ್ಯಮ್ಮ, ರತ್ನಮ್ಮ, ಮಾಲಾ, ಶ್ರುತಿ ಉಪಸ್ಥಿತರಿದ್ದರು.