ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಠ್ಯಕ್ರಮಕ್ಕೆ ಭರತನಾಟ್ಯ ಸೇರಿಸಿ’

Last Updated 20 ಜನವರಿ 2019, 13:15 IST
ಅಕ್ಷರ ಗಾತ್ರ

ವಿಜಯಪುರ:ಭರತನಾಟ್ಯವನ್ನು ಶೈಕ್ಷಣಿಕ ಪಠ್ಯಕ್ರಮದಲ್ಲಿ ಒಂದು ಐಚ್ಛಿಕ ವಿಷಯವನ್ನಾಗಿಸಿ ಕಲೆಗೆ ಪ್ರೋತ್ಸಾಹ ನೀಡಬೇಕು ಎಂದುದಾತಾರ್ ಇನ್‌ಸ್ಟಿಟ್ಯೂಟ್ ಆಫ್ ಫೈನ್ ಆರ್ಟ್ಸ್‌ನ ನಿರ್ದೇಶಕಿ ಉಷಾ ದಾತಾರ್ ಒತ್ತಾಯಿಸಿದರು.

ಇಲ್ಲಿನ ಬಿಎಂಎಸ್ ಸಮುದಾಯ ಭವನದಲ್ಲಿ ಭಾನುವಾರ ಇಡಗುಂಜಿ ಮಹಾಗಣಪತಿ ನೃತ್ಯ ಸಂಸ್ಥೆಯಿಂದ ಆಯೋಜಿಸಿದ್ದ ದ್ವಿತೀಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭರತನಾಟ್ಯ ನಿಂತ ನೀರಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ, ನೃತ್ಯ, ಉಡುಗೆ-ತೊಡುಗೆ ಯುವಜನತೆಯನ್ನು ಆಕರ್ಷಿಸುತ್ತಿದೆ. ನಮ್ಮ ಸಂಸ್ಕೃತಿಯ ತಿರುಳನ್ನು ಹೊಂದಿರುವ ಭರತನಾಟ್ಯವನ್ನು ಆಭ್ಯಸಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ಮಂಜುನಾಥ್ ಮಾತನಾಡಿ, ‘ಭರತನಾಟ್ಯ ಭಾರತೀಯರಿಗೆ ಪರಂಪರಾಗತವಾಗಿ ಬಂದ ಕಲೆಯಾಗಿದೆ. ಅಂತಹ ಕಲೆ, ಸಾಹಿತ್ಯವನ್ನು ಉಳಿಸಿ ಬೆಳೆಸುವ ಹೊಣೆ ನಮ್ಮಲ್ಲರದ್ದಾಗಿದೆ’ ಎಂದರು.

ಮಕ್ಕಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ವಿದ್ವಾನ್ ರಾಜು ದಾತಾರ್, ಗೌರಿವಿಶ್ವನಾಥ್, ವೈ.ಕೆ. ಸಾಯಿಬಾಬಾ, ಎಂ.ವಿ.ನಾಯ್ಡು, ಆರ್.ರಾಜಶೇಖರ್, ಪಿ.ಸುರೇಶ್, ಎಸ್.ಎಂ.ಸುಧೀರ್, ಎಂ.ವೆಂಕಟೇಶ್, ರಾಕೇಶ್ ದತ್ತ, ಲೋಕೇಶ್, ವೆಂಕಟೇಶ ಸಾಗರ್, ಎಸ್.ಉಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT