ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ: ಜಿಇಎಫ್ ಆಸ್ಪತ್ರೆಗೆ ಆಂಬುಲೆನ್ಸ್ ಕೊಡುಗೆ

Last Updated 26 ಜೂನ್ 2022, 7:25 IST
ಅಕ್ಷರ ಗಾತ್ರ

ಹೊಸಕೋಟೆ: ನಗರದ ಜಿಇಎಫ್ ಕಣ್ಣಿನ ಆಸ್ಪತ್ರೆಗೆ ಕ್ಯಾನ್ ಫಿನ್ ಹೋಮ್ಸ್‌ನಿಂದ ಆಸ್ಪತ್ರೆಯ ತುರ್ತು ಬಳಕೆಗಾಗಿ ಆಂಬುಲೆನ್ಸ್ ಅನ್ನು ಕೊಡುಗೆಯಾಗಿ ನೀಡಲಾಯಿತು.

ಕ್ಯಾನ್ ಫಿನ್ ಹೋಮ್ಸ್‌ನ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್‌ ಅಮಿತಾಬ್ ಚಟರ್ಜಿ ಮಾತನಾಡಿ, ಜಿಇಎಫ್ ಆಸ್ಪತ್ರೆಯ ಸೇವೆ ಪರಿಗಣಿಸಿ ಸುಮಾರು ₹ 20 ಲಕ್ಷ ವೆಚ್ಚದ ಆಧುನಿಕ ತಂತ್ರಜ್ಞಾನದ ಸಲಕರಣೆಗಳನ್ನು ಒಳಗೊಂಡ ಆಂಬುಲೆನ್ಸ್ ಅನ್ನು ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಅವಶ್ಯಕತೆ ಇರುವ ಇತರೆ ಸೌಲಭ್ಯಗಳನ್ನೂ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ಆಸ್ಪತ್ರೆ ಅಧ್ಯಕ್ಷ ಡಾ.ಸುಂದರರಾಮ್ ಶೆಟ್ಟಿ, ಆಸ್ಪತ್ರೆಯು ಕಳೆದ 27 ವರ್ಷಗಳ ಹಿಂದೆ ಗ್ಲೋಬಲ್ ಐ ಫೌಂಡೇಶನ್ ಎಂಬ ಸಾಮಾಜಿಕ ಸೇವಾ ಸಂಸ್ಥೆಯಡಿ ಸಣ್ಣದಾಗಿ ಪ್ರಾರಂಭವಾಯಿತು. ಇದುವರೆಗೂ ಸುಮಾರು 8 ಲಕ್ಷ ಜನರಿಗೆ ನೇತ್ರ ತಪಾಸಣೆ ನಡೆಸಿ ಅಗತ್ಯವಿರುವ 1.5 ಲಕ್ಷ ಜನರಿಗೆ ರೋಟರಿ ಸಂಸ್ಥೆ, ರಾಷ್ಟ್ರೀಯ ಯೋಜನೆಯಡಿ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ ಎಂದರು.

ಆಸ್ಪತ್ರೆಯು ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ನೇತ್ರ ತಪಾಸಣಾ ಶಿಬಿರ ಆಯೋಜಿಸುವುದರೊಂದಿಗೆ ಸಾರ್ವಜನಿಕರಿಗೆ ನೇತ್ರ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕ್ಯಾನ್ ಫಿನ್ ಹೋಮ್ಸ್‌ನ ಪ್ರಶಾಂತ ಜೋಷಿ, ಜಿಇಎಫ್ ಕಣ್ಣಿನ ಆಸ್ಪತ್ರೆ ಕಾರ್ಯದರ್ಶಿ ಎಂ.ಕೆ. ರಂಜನ್ ಭಂಡಾರಿ, ವ್ಯವಸ್ಥಾಪಕ ಬಾಲಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT