ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯೋಧ್ಯೆ ತೀರ್ಪು: ದೇವನಹಳ್ಳಿಯಲ್ಲಿ ಶಾಂತ ಪರಿಸ್ಥಿತಿ 

Last Updated 9 ನವೆಂಬರ್ 2019, 14:14 IST
ಅಕ್ಷರ ಗಾತ್ರ

ದೇವನಹಳ್ಳಿ: ತೀವ್ರ ಕುತೂಹಲ ಕೆರಳಿಸಿದ್ದ ಆಯೋಧ್ಯೆ ತೀರ್ಪು ಪ್ರಕಟಗೊಂಡ ಹಿನ್ನೆಲೆಯಲ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತ ವಾತಾವರಣ ಇತ್ತು.

ತಿಂಗಳ 2ನೇ ಶನಿವಾರದ ಪ್ರಯುಕ್ತ ಸರ್ಕಾರದ ಎಲ್ಲ ಇಲಾಖೆಗೆ ಎಂದಿನಂತೆ ರಜೆ ಇದ್ದುದ್ದು ಒಂದೆಡೆಯಾದರೆ, ರಾಜ್ಯ ಸರ್ಕಾರ ಶಾಲಾ, ಕಾಲೇಜಿಗೆ ಒಂದು ದಿನದ ಮಟ್ಟಿಗೆ ರಜೆ ಘೊಷಣೆ ಮಾಡಿದ ಹಿನ್ನಲೆಯಲ್ಲಿ ಯಾವುದೇ ಶೈಕ್ಷಣಿಕ ಚಟುವಟಿಕೆಗಳು ನಡೆಯಲಿಲ್ಲ. ಕಾರ್ಮಿಕರು, ಇತರ ಪ್ರಯಾಣಿಕರು ಎಂದಿನಂತೆ ಸಂಚಾರದಲ್ಲಿ ತೊಡಗಿಸಿಕೊಂಡಿದ್ದರು.

ಬೆಂಗಳೂರು ನಗರ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ದೇವನಹಳ್ಳಿ ನಗರವೂ ಒಳಗೊಂಡಿರುವುದರಿಂದ ಅಷ್ಟೊಂದು ಸೂಕ್ಷ್ಮ ಪ್ರದೇಶವಲ್ಲ ಎಂಬ ಮಾಹಿತಿ ಮೇರೆಗೆ ಠಾಣೆಯ ಬಹುತೇಕ ಸಿಬ್ಬಂದಿ ಬೆಂಗಳೂರು ನಗರದಲ್ಲಿ ವಿವಿಧ ಆಯಕಟ್ಟಿನ ಸ್ಥಳದಲ್ಲಿ ನಿಯೋಜನೆಗೊಂಡಿದ್ದರು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮತ್ತೊಂದೆಡೆ ವಿಶ್ವನಾಥಪುರ ಪೋಲಿಸ್ ಠಾಣೆ ಪೊಲೀಸರು ಜಿಲ್ಲಾಡಳಿತ ಕೇಂದ್ರಕ್ಕೆ ಬಿಗಿ ಭದ್ರತೆ ಒದಗಿಸಿದ್ದರು.

‘ಯಾವುದೇ ರೀತಿಯ ಹೇಳಿಕೆ, ಪ್ರತಿ ಹೇಳಿಕೆಯನ್ನು ಯಾವುದೇ ಪಕ್ಷದ ನಾಯಕರು ನೀಡಿಲ್ಲ. ಪರಿಸ್ಥಿತಿ ತಿಳಿಯಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT