ಬನ್ನೇರುಘಟ್ಟ: ಸಿಂಗಲೀಕನ ಜನ್ಮದಿನ, ನೀರಾನೆಗೆ ನಾಮಕರಣ

7

ಬನ್ನೇರುಘಟ್ಟ: ಸಿಂಗಲೀಕನ ಜನ್ಮದಿನ, ನೀರಾನೆಗೆ ನಾಮಕರಣ

Published:
Updated:
Deccan Herald

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಏಳು ವರ್ಷದ ಸಿಂಗಳೀಕನ (ಸಿಂಹ ಬಾಲದ ಕೋತಿ) ಜನ್ಮ ದಿನಾಚರಣೆ ಹಾಗೂ ಹಿಪ್ಪೊಪೊಟೊಮಸ್‌ಗೆ (ನೀರಾನೆ) ನಾಮಕರಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗಿ ಕಂಡು ಬರುವ ಸಿಂಹಬಾಲದ ಕೋತಿ ಏಳು ವರ್ಷದ ರೇಣುಕಾ ಉದ್ಯಾನದ ಆಕರ್ಷಣೆಯಾಗಿದೆ. ಸಿಬ್ಬಂದಿ, ಹಣ್ಣು ನೀಡಿ ವಿಶೇಷ ಆರೈಕೆ ಮಾಡಿ ಜನ್ಮದಿನ ಆಚರಿಸಿದರು. ಉದ್ಯಾನಕ್ಕೆ ಬಂದಿದ್ದ ಪ್ರವಾಸಿಗರು ಹುಟ್ಟುಹಬ್ಬವನ್ನು ವೀಕ್ಷಿಸಿದರು.

ಜೈವಿಕ ಉದ್ಯಾನದ ನೀರಾನೆ ದಶ್ಯಾ ಮತ್ತು ಕಾರ್ತಿಕ್‌ಗೆ ಜನವರಿಯಲ್ಲಿ ಮರಿ ಜನಿಸಿತ್ತು. ಈ ಮರಿಯನ್ನು ಬೆಂಗಳೂರು ಅಮಲಾ ಅಲೋಕ್ ಫಾರ್ಮ್‌ನವರು ಒಂದು ವರ್ಷಕ್ಕೆ ದತ್ತು ಪಡೆದಿದ್ದು ಈ ಪುಟ್ಟ ಮರಿಗೆ ‘ಅಲೋಕ್’ ಎಂದು ನಾಮಕರಣ ಮಾಡಲಾಯಿತು.

ದಶ್ಯಾಳಿಗೆ ಈ ಹಿಂದೆ ಜನಿಸಿದ್ದ ನಾಲ್ಕು ಮರಿಗಳು ತಾಯಿಯ ಸಮರ್ಪಕ ಆರೈಕೆಯಿಲ್ಲದೇ ಉಳಿದಿರಲಿಲ್ಲ. ಉದ್ಯಾನದ ಸಿಬ್ಬಂದಿ ಅತಿ ಹೆಚ್ಚಿನ ಜವಾಬ್ದಾರಿ ವಹಿಸಿ ತಾಯಿ ದಶ್ಯಾಳನ್ನು ಪಳಗಿಸಿದ್ದರಿಂದ ತಾಯಿಯು ಮರಿಯನ್ನು ಚೆನ್ನಾಗಿ ನೋಡಿಕೊಂಡಿದ್ದು ಮರಿಯು ಆರೋಗ್ಯಯುತವಾಗಿದೆ. ಈ ಮರಿಯ ದತ್ತು ಪ್ರಕ್ರಿಯೆಯನ್ನು ಉದ್ಯಾನದ ಅಧಿಕಾರಿಗಳು ಪೂರ್ಣಗೊಳಿಸಿ ಪ್ರಮಾಣಪತ್ರ ವಿತರಿಸಿದರು ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !