ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಿದುಳು ನಿಷ್ಕ್ರಿಯ: ಯುವಕನ ಅಂಗಾಂಗ ದಾನ

Last Updated 2 ನವೆಂಬರ್ 2022, 6:24 IST
ಅಕ್ಷರ ಗಾತ್ರ

ವಿಜಯಪುರ(ಬೆಂ.ಗ್ರಾಮಾಂತರ): ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯವಾಗಿದ್ದ ಹಾರೋಹಳ್ಳಿಯ ಯುವಕ ರಾಜು ಎಲ್(22) ಅವರ ಅಂಗಾಂಗಗಳನ್ನು ಅವರ ಕುಟುಂಬಸ್ಥರು ದಾನ ಮಾಡಿದ್ದಾರೆ.

ಹೋಬಳಿಯ ವಿಜಯಪುರ-ದಂಡಿಗಾನಹಳ್ಳಿ ರಸ್ತೆಯಲ್ಲಿ ಅ.23ರಂದು ನಡೆದಅಪಘಾತದಲ್ಲಿ ಯುವಕ ತೀವ್ರವಾಗಿ ಗಾಯಗೊಂಡಿದ್ದ. ಆತನಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಸೋಮವಾರ ರಾತ್ರಿಯುವಕನ ಮೆದುಳು ನಿಷ್ಕ್ರಿಯವಾಗಿದೆಎಂದು ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದರು.

ರಾಜು ಅವರು ಹಾರೋಹಳ್ಳಿ ಗ್ರಾಮದ ಲಕ್ಷ್ಮಯ್ಯ, ವೆಂಕಟೇಶಮ್ಮ ಅವರ ಮೂರನೇ ಪುತ್ರ. ಪೋಷಕರು ತಮ್ಮ ಮಗನ ಹೃದಯ, ಮೂತ್ರ ಪಿಂಡಗಳು, ಎರಡು ಕಣ್ಣು, ಯಕೃತ್ತು ದಾನ ಮಾಡಿದ್ದಾರೆ.

ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾದ ಜೀವ ಸಾರ್ಥಕ ಸಂಸ್ಥೆಗೆ ಅಂಗಾಂಗ ಒಪ್ಪಿಸಿದ್ದಾರೆ. ಮೃತ ಯುವಕನ ಅಂತ್ಯಸಂಸ್ಕಾರ ಮಂಗಳವಾರ ನೆರವೇರಿತು.

ಮೃತನ ಸಹೋದರ ಸುದರ್ಶನ್ ಮಾತನಾಡಿ, ‘ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನನ್ನ ತಮ್ಮನ ಪ್ರಾಣ ಉಳಿಸುವುದು ಕಷ್ಟವೆಂದು ವೈದ್ಯರು ತಿಳಿಸಿದರು. ಆತನ ದೇಹದಲ್ಲಿನ ಅಂಗಾಂಗಳನ್ನು ಮಣ್ಣಿಗೆ ಹಾಕುವುದು ಬೇಡ. ಅವು ಒಂದಷ್ಟು ಮಂದಿಗೆ ಬೆಳಕಾಗಲಿ ಎನ್ನುವ ಕಾರಣಕ್ಕೆ ಅಂಗಾಂಗ ದಾನ ಮಾಡಿದ್ದೇವೆ. ಈ ಮೂಲಕವಾದರೂ ನನ್ನ ತಮ್ಮ ಬದುಕಿದ್ದಾನೆ ಎನ್ನುವ ಸಂತೃಪ್ತಿಯಿದೆ’ ಎಂದರು.

ಘಟನೆ ಹಿನ್ನೆಲೆ: ದೀಪಾವಳಿ ಹಬ್ಬಕ್ಕೆ ಮನೆಗೆ ಸಾಮಾನು ಖರೀದಿಸಲೆಂದು ಹೋಗಿದ್ದ ಯುವಕ ಮನೆಗೆ ವಾಪಸ್ ಬರುವಾಗ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದ ಈ ಕುರಿತು ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT