ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೌರ ನಿರಾಕರಣೆ ಅರೋಪ: ಅಧಿಕಾರಿಗಳ ಭೇಟಿ

Published 19 ಫೆಬ್ರುವರಿ 2024, 14:53 IST
Last Updated 19 ಫೆಬ್ರುವರಿ 2024, 14:53 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ಕಾಡನೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ ನಿರಾಕರಣೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಸದಸ್ಯ ಓಬದೇನಹಳ್ಳಿ ಮುನಿಯಪ್ಪ ಹಾಗೂ ಅಧಿಕಾರಿಗಳ ತಂಡ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಮಾಧ್ಯಗಳೊಂದಿಗೆ ಮಾತನಾಡಿದ ಓಬದೇನಹಳ್ಳಿ ಮುನಿಯಪ್ಪ, ನಾಗರಿಕ ಸಮಾಜದಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿರುವುದು ವಿಷಾದನೀಯ. ಈ ಕುರಿತು ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆಯಲಾಗಿದೆ ಎಂದರು.

ಸವಿತಾ ಸಮಾಜದ ತಾಲೂಕು ಕಾರ್ಯದರ್ಶಿನರಸಿಂಹ ರಾಜು ಮಾತನಾಡಿ, ಸವಿತ ಸಮಾಜದ ಎಲ್ಲ ವೃತ್ತಿನಿರತರನ್ನು ಒಗ್ಗೂಡಿಸಿ ಜಾಗೃತಿ ಸಭೆಯನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು. ಈ ರೀತಿಯ ತಾರತಮ್ಯಗಳು ಈ ಹಿಂದೆ ಕಂಡು ಬಂದಿಲ್ಲ ಎಲ್ಲರೂ ಸಹಬಾಳ್ವೆಯ ಮೂಲಕ ಬದುಕು ನಡೆಸಬೇಕು ಎಂದರು.

ವೇಳೆ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಓಬಳೇಶ್, ಪೋಲಿಸ್ ಸಿಬ್ಬಂದಿ ಸುರೇಶ್, ಪಿಡಿಒ ಸೂರ್ಯನಾರಾಯಣ್, ಸವಿತಾ ಸಮಾಜದ  ರಾಮಂಜಿನೇಯ ಶ್ರೀನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT