25 ವರ್ಷಗಳ ದಾಖಲೆ ಮೀರಿಸಿದ ಚಳಿ

7

25 ವರ್ಷಗಳ ದಾಖಲೆ ಮೀರಿಸಿದ ಚಳಿ

Published:
Updated:
Prajavani

ದೇವನಹಳ್ಳಿ: ಜ.2ರಿಂದ ಇದುವರೆಗೂ ಕನಿಷ್ಠ ಮಟ್ಟಕ್ಕೆ ಇಳಿದಿರುವ ಉಷ್ಣಾಂಶದಿಂದಾಗಿ ಜನರು ಚಳಿಯಿಂದ ತತ್ತರಿಸುವಂತಾಗಿದೆ.

ಕಳೆದ 25ವರ್ಷಗಳ ಹಿಂದಿನ ದಾಖಲೆ ಮೀರಿರುವ ಚಳಿಯಿಂದ ಪ್ರತಿದಿನ ಉಷ್ಣಾಂಶ 9ರಿಂದ 12ರ ಆಸುಪಾಸು ಇದೆ. ಬೆಳಿಗ್ಗೆ 10ರವರೆಗೆ ಚಳಿ ತೀವ್ರತೆ ಇರಲಿದೆ. ಸಂಜೆ 4ರ ಸುಮಾರಿಗೆ ಮತ್ತೆ ಚಳಿ ಆಟ ಆರಂಭಗೊಂಡು ಮೈ ನಡುಗುವಂತೆ ಆಗಿದೆ.

ಚಳಿ ತೀವ್ರತೆ ಹಿನ್ನೆಲೆಯಲ್ಲಿ ಸ್ವೆಟರ್, ಉಲ್ಲನ್ ಹೊದಿಕೆ, ಜರ್ಸಿ, ಜಾಕೇಟ್ ವಹಿವಾಟು ಜೋರಾಗಿದೆ.  ಚಳಿಗೆ ಬೆಂಕಿ ಕಾಯಿಸಿಕೊಳ್ಳುವವರು ಒಂದೆಡೆಯಾದರೆ, ಕಾಫಿ, ಟೀ ಸೇವನೆ ಕಡಿಮೆಯಾಗಿಲ್ಲ. ತಂಪು ಹವಾಮಾನಕ್ಕೆ ಒಗ್ಗಿಕೊಳ್ಳಲು ಉಷ್ಣಾಂಶದ ಪದಾರ್ಥಗಳ ಖರೀದಿಗೆ ಗ್ರಾಹಕರು ಹೆಚ್ಚು ಒತ್ತು ನೀಡುತ್ತಿದ್ದಾರೆ.

ಇದೊಂದು ಭಯಾನಕ ಚಳಿ ಎಂದು ಬಸ್ ಚಾಲಕ ರಮೇಶ್ ಬಣ್ಣಿಸಿದ್ದಾರೆ. ಅತಿಯಾದ ಚಳಿ ತೀವ್ರತೆಯಿಂದ ಶೀತ, ನೆಗಡಿ, ಜ್ವರ, ಕಫ, ರಕ್ತದೊತ್ತಡ, ಹೃದಯ ಸಂಬಂಧಿ ರೋಗಿಗಳು ಹೆಚ್ಚಾಗಲಿವೆ ಎನ್ನುತ್ತಾರೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ರೀನಿವಾಸ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !