ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಬೀದಿಯಲ್ಲಿ ಭಕ್ತ ಸಿರಿಯಾಳ ಉತ್ಸವ 

Last Updated 8 ಏಪ್ರಿಲ್ 2019, 13:29 IST
ಅಕ್ಷರ ಗಾತ್ರ

ದೇವನಹಳ್ಳಿ: ಇಲ್ಲಿನ ನಗರೇಶ್ವರ ದೇವಾಲಯದ ಆವರಣದಿಂದ ವಾರ್ಷಿಕ ಭಕ್ತ ಸಿರಿಯಾಳ ಉತ್ಸವವನ್ನು ರಾಜ ಬೀದಿಗಳಲ್ಲಿ ನಡೆಸಲಾಯಿತು.

ವಾರ್ಷಿಕ ಯುಗಾದಿ ಹಬ್ಬದ ನಂತರ ಮೂರು ದಿನಕ್ಕೆ ನಡೆಯುವ ಭಕ್ತ ಸಿರಿಯಾಳ ಉತ್ಸವ ಮೂರ್ತಿಗೆ ನಗರೇಶ್ವರ ದೇವಾಲಯದಲ್ಲಿ ಅಯೋಧ್ಯ ನಗರ ಶಿವಾಚಾರ ವೈಶ್ಯ ನಗರ್ತ ಸಮುದಾಯ ವತಿಯಿಂದ ಬೆಳಿಗ್ಗೆ ವಿಘ್ನೇಶ್ವರ ಪೂಜೆ ನೆರವೇರಿಸಲಾಯಿತು. ನಗರೇಶ್ವರ ಸ್ವಾಮಿಗೆ ವಿಶೇಷ ಪೂಜೆಯ ನಂತರ ಭಕ್ತ ಸಿರಿಯಾಳ ಉತ್ಸವ ಮೂರ್ತಿಗೆ ಮೂಲ ಪೀಠದಲ್ಲಿ ಅಭಿಷೇಕ, ನೂತನ ವಸ್ತ್ರಾಲಂಕಾರ, ನಂತರ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

ಮಂಗಳವಾದ್ಯದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಿ ಮೂಲ ಸ್ಥಳಕ್ಕೆ ಪ್ರತಿಷ್ಠಾಪಿಸಲಾಯಿತು. ನಂತರ ಭಖ್ತರಿಗೆ ತೀರ್ಥ ಪ್ರಸಾದ ನೀಡಲಾಯಿತು.

ಧಾರ್ಮಿಕ ಆಚರಣೆ ಕುರಿತು ಅಯೋಧ್ಯ ನಗರ ಶಿವಾಚಾರ ವೈಶ್ಯ ನಗರ್ತ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ರಮೇಶ್ ಕುಮಾರ್ ಮಾತನಾಡಿ, ಪರಂಪರೆಯ ಅನೇಕ ಧಾರ್ಮಿಕ ಆಚರಣೆಗಳು ಆಧುನಿಕತೆಯಿಂದ ಮೂಲೆಗೆ ಸರಿಯುತ್ತಿವೆ. ತಲಾಂತರದ ಸಂಸ್ಕೃತಿ ಆಚಾರ ವಿಚಾರಗಳು ಕಡಿಮೆಯಾಗುತ್ತಿವೆ ಎಂದರು.

‘ಹಿರಿಯರು ನಡೆಯಿಸಿಕೊಂಡು ಬರುತ್ತಿರುವ ಪದ್ಧತಿಯನ್ನು ಮುಂದುವರೆಸುವ ಅವಶ್ಯಕತೆ ಇದೆ. ಶತಮಾನಗಳಿಂದ ಭಕ್ತ ಸಿರಿಯಾಳ ಉತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಇನ್ನು ಮುಂದುವರೆಸುವುದು ನಮ್ಮ ಕರ್ತವ್ಯ ಕೂಡ’ ಎಂದು ಹೇಳಿದರು.

ಸಂಘದ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಮಂಜಣ್ಣ, ಮುಖಂಡರಾದ ವೈ.ಪಿ. ವಿಜಯಕುಮಾರ್, ನಾಗರಾಜು, ಎ.ಬಿ. ಸುರೇಶ್, ಎ.ಬಿ. ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT