ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ | ಆಕಸ್ಮಿಕ ಬೆಂಕಿ; ಹುಲ್ಲಿನ ಬಣವೆ ಭಸ್ಮ

Published 28 ಏಪ್ರಿಲ್ 2024, 5:51 IST
Last Updated 28 ಏಪ್ರಿಲ್ 2024, 5:51 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ಚಿಕ್ಕನಹಳ್ಳಿಯಲ್ಲಿ ಶನಿವಾರ ಬಿಸಿಲಿನ ಬೇಗೆಯ ನಡುವೆ ಜಾನುವಾರುಗಳಿಗೆ ಖರೀದಿಸಿ ಬಣವೇ ಹಾಕಲಾಗಿದ್ದ ಒಣ ಮೇವಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಸಾವಿರ ರೂಪಾಯಿ ಮೌಲ್ಯದ ಮೇವು ಸುಟ್ಟು ಭಸ್ಮವಾಗಿದೆ.

ಚಿಕ್ಕನಹಳ್ಳಿ ಗ್ರಾಮದ ಮುನಿರಾಜು ಎಂಬುವವರು ವಾರದ ಹಿಂದೆಯಷ್ಟೇ ಒಂದು ಹುಲ್ಲಿನ ಪೆಂಡಿಗೆ ₹300 ಗಳಂತೆ ಕೊಟ್ಟು ಹುಲ್ಲು ತಂದು ಬಣವೇ ಹಾಕಿದ್ದರು. ಆದರೆ ಶನಿವಾರ ಬಿಸಿಲಿನ ತೀವ್ರತೆಯ ಜೊತೆ ಆಕಸ್ಮಿಕ ತಗುಲಿದ ಬೆಂಕಿ ಬಣವೇ ಸಂಪೂರ್ಣ ಸುಟ್ಟು ಹೋಗಿದ್ದು, ಸಾವಿರಾರು ರೂಪಾಯಿ ನಷ್ಟವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತೀವ್ರವಾದ ಬರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೇವಿನ ಬ್ಯಾಂಕ್ ಸ್ಥಾಪನೆ ಮುಂತಾದ ಬರ ನಿರ್ವಹಣೆ ಕುರಿತು ಅನೇಕ ಘೋಷಣೆ ಮಾಡಿದೆ. ಆದರೆ ತಾಲ್ಲೂಕಿನಲ್ಲಿ ಬರ ನಿರ್ವಹಣೆ ಕುರಿತು ಯಾವುದೇ ಕ್ರಮವನ್ನು ತಾಲ್ಲೂಕು ಆಡಳಿತ ಮಾಡುತ್ತಿಲ್ಲ ಎಂದು ರೈತರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT