ಬುಧವಾರ, ಏಪ್ರಿಲ್ 14, 2021
26 °C

ಕೆಲಸಕ್ಕೂ ಸೈ, ನೃತ್ಯಕ್ಕೂ ಸೈ

ವಡ್ಡನಹಳ್ಳಿ ಭೋಜ್ಯಾನಾಯ್ಕ್ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಒಬ್ಬ ಮಹಿಳೆ ಕುಟುಂಬಕ್ಕೆ ಸೀಮಿತವಾಗದೆ, ಇಲಾಖೆಯಲ್ಲಿ ಕರ್ತವ್ಯಕ್ಕೆ ಅಂಟಿಕೊಳ್ಳದೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದವರೆಗೂ ತನ್ನ ಛಾಪು ಮೂಡಿಸಿರುವ ಅಪ್ಪಟ ಬಹುಮುಖ ಪ್ರತಿಭೆ ಮಿಲನ ಭರತ್.

ಮೀನುಗಾರಿಕೆ ತಂತ್ರಜ್ಞಾನದಲ್ಲಿ ಪದವಿ, ಎಂಬಿಎ ಪದವಿಯಲ್ಲಿ ಚಿನ್ನದ ಪದಕ, ಮಾನವ ಸಂಪನ್ಮೂಲದಲ್ಲಿ ಸ್ನಾತಕ್ಕೋತ್ತರ ಪದವಿ ಪಡೆದು ದೇವನಹಳ್ಳಿಯಲ್ಲಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 22 ವರ್ಷಗಳಿಂದ ಭರತನಾಟ್ಯ, ಕೂಚುಪುಡಿ, ಒಡಿಸ್ಸಿ ನೃತ್ಯಪಟುವೂ ಹೌದು.

ಸರ್ಕಾರಿ ನೌಕರರ ಸಂಘದ ವತಿಯಿಂದ ನಡೆಯುವ ವಾರ್ಷಿಕ ಸಾಂಸ್ಕೃತಿ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ 4 ಬಾರಿ ಪ್ರಶಸ್ತಿ ಪಡೆದಿದ್ದಾರೆ. ರಾಷ್ಟ್ರಮಟ್ಟದಲ್ಲೂ ಇವರ ಪ್ರತಿಭೆಗೆ ಮನ್ನಣೆ ಸಿಕ್ಕಿದೆ.

ಸಾಂಸಾರಿಕ ಜೀವನದಲ್ಲಿ ಕುಟುಂಬ ಅತಿ ಮುಖ್ಯವಾದರೂ ಸಮಯ ಮತ್ತು ಅವಕಾಶಗಳನ್ನು ಮಹಿಳೆಯರು ಬಳಸಿಕೊಳ್ಳಬೇಕೆಂದು ಕಿವಿಮಾತು ಹೇಳುತ್ತಾರೆ. ಇವರು ಕವಿಯತ್ರಿಯೂ ಹೌದು. ’ಭಾವಲಹರಿ’, ’ಮೌನ ಮುರಿಯುವ ಸಮಯ’ ಎನ್ನುವ ಎರಡು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಸಂಶೋಧನೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಕಿರುತರೆ ನಟಿಯಾಗಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಜೋಗುಳ ಮತ್ತು ಮುಂಬೆಳಕು ಧಾರವಾಹಿಗಳಲ್ಲಿ ನಟಿಸಿ  ಪ್ರಶಸ್ತಿ – ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು